ಬೆಂಗಳೂರು: ನಿನ್ನೆ ಸಿಎಂ ಕ್ಲೋಸ್ಡೌನ್ ಅನೌನ್ಸ್ ಮಾಡ್ತಿದ್ದಂತೆ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಂಡಿದ್ದ ಕೆಲವರು ಊರು ಬಿಡೋದಕ್ಕೆ ಶುರುಮಾಡಿದ್ದಾರೆ.
ಇಂದು ರಾತ್ರಿಯಿಂದ ರಾಜ್ಯದಲ್ಲಿ ಕ್ಲೋಸ್ಡೌನ್ ಜಾರಿಯಾಗಲಿದೆ. ಹೀಗಾಗಿ ಜನರು ಕುಟುಂಬಸಮೇತ, ಗಂಟು ಮೂಟೆ ಕಟ್ಟಿಕೊಂಡು ತಮ್ಮೂರಿನತ್ತ ತೆರಳುತ್ತಿದ್ದಾರೆ. ಹೀಗಾಗಿ ಮೂರು ಸಾರಿಗೆ ನಿಗಮಗಳಿಂದ 12 ಸಾವಿರಕ್ಕೂ ಅಧಿಕ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳನ್ನ ಬಿಟ್ಟ ಹಿನ್ನೆಲೆ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಬೆಳಗ್ಗೆ 5.30ರಿಂದ, ಮೆಜೆಸ್ಟಿಕ್ ಕೆಎಸ್ಆರ್ಟಿಸಿ ನಿಲ್ದಾಣದಿಂದ ಮೆಟ್ರೋ ಸ್ಟೇಷನ್ವರೆಗೂ ಫುಲ್ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸಪಡುವಂತಾಗಿದೆ.
ಬಿಎಂಟಿಸಿ ಬಸ್ಗಳಲ್ಲೂ ಜನರ ಸಂಖ್ಯೆ ಹೆಚ್ಚುತ್ತಿದೆ. ಜನರು ಬೆಂಗಳೂರಿನ ನಾನಾ ಕಡೆಗಳಿಂದ ಬಿಎಂಟಿಸಿ ಬಸ್ನಲ್ಲಿ ಬಂದು ಬಳಿಕ ಕೆಎಸ್ಆರ್ಟಿಸಿ ಬಸ್ನಲ್ಲಿ ಹಾಗೂ ರೈಲಿನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದಾರೆ.
Laxmi News 24×7