Home / ರಾಜಕೀಯ / ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ: ಸಂಕಷ್ಟದಲ್ಲಿ ಡಬ್ಬಾವಾಲಾಗಳು

ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ: ಸಂಕಷ್ಟದಲ್ಲಿ ಡಬ್ಬಾವಾಲಾಗಳು

Spread the love

ಮುಂಬೈ, ಏಪ್ರಿಲ್ 15: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದ್ದು, ಜನರಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಈ ಮಧ್ಯೆ ಮುಂಬೈ ಡಬ್ಬಾವಾಲಾಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಂಬೈನಲ್ಲಿ ಒಟ್ಟು 5 ಸಾವಿರ ಡಬ್ಬಾವಾಲಾಗಳಿದ್ದರು, ಆದರೆ ಕೊರೊನಾ ಬಳಿಕ ಅವರಲ್ಲಿ ಕೇವಲ 400,500ರಷ್ಟು ಡಬ್ಬಾವಾಲಾಗಳು ಮಾತ್ರ ಕೆಲಸ ಮಾಡುತ್ತಿದ್ದರು. ಇದೀಗ ಮತ್ತೆ ಹೊಸ ನಿಯಮಗಳು ಜಾರಿಗೊಂಡಬಳಿಕ 200-250 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಇದೀಗ ಡಬ್ಬಾವಾಲಾಗಳ ಪರಿಸ್ಥಿತಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂಬುದು ತಿಳಿದುಬಂದಿದೆ.

ಮುಂಬೈನ ಡಬ್ಬಾವಾಲಾಗಳು ಟಿಫಿನ್ ಬಾಕ್ಸ್‌ಗಳನ್ನು ಮನೆಗಳಿಗೆ ಹಾಗೂ ಕಚೇರಿಗಳಿಗೆ ತೆಗೆದುಕೊಂಡು ಹೋಗಿ ಕೊಡುತ್ತಾರೆ. ಮುಂಬೈನಲ್ಲಿ ಡಬ್ಬಾವಾಲಾಗಳ ಸೇವೆ ಪ್ರಮುಖವಾಗಿದ್ದು, ಸಹಸ್ರಾರು ಜನರು ಇದರ ಮೇಲೆ ಅವಲಂಬಿತರಾಗಿದ್ದಾರೆ.

ಆದರೆ, ಕೊರೊನಾ ವೈರಸ್ ಮಹಾರಾಷ್ಟ್ರ ಸೇರಿ ದೇಶಾದ್ಯಂತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟಿಫಿನ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಿಗಿತಗೊಳಿಸಲಾಗುತ್ತಿದೆ ಇದರಿಂದ ಡಬ್ಬಾವಾಲಾಗಳ ಜೀವನ ಕೂಡ ಬೀದಿಪಾಲಾಗುವ ಸಾಧ್ಯತೆ ಇದೆ.

ಹೀಗಾಗಿ ಸಹಾಯ ಮಾಡುವಂತೆ ಮಹಾರಾಷ್ಟ್ರ ಸರ್ಕಾರದ ಬಳಿ ಡಬ್ಬಾವಾಲಾಗಳು ಮನವಿ ಮಾಡಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಟಿಫಿನ್ ಸೇವೆ ಮಾಡುತ್ತಿದ್ದರು.

15 ದಿನಗಳ ಕಾಲ ಕರ್ಫ್ಯೂ ವಿಧಿಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರವು ಜನರನ್ನು ಬೆಂಬಲಿಸಲು 5,400 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಮಹಾರಾಷ್ಟ್ರದಲ್ಲಿ ಬುಧವಾರ 58,952 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. 278 ಮಂದಿ ಮೃತಪಟ್ಟಿದ್ದರು.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ