ಬೆಂಗಳೂರು: ಯುಗಾದಿ ಹಬ್ಬದಂದು ನಟ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಯುವರತ್ನ ಸಿನಿಮಾ ಬಳಿಕ ಮತ್ತೆ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ಪುನೀತ್ ರಾಜ್‍ಕುಮಾರ್ ಅಭಿನಯಿಸುತ್ತಿದ್ದಾರೆ.
ಈ ಕುರಿತು ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರ್ ಟ್ವೀಟ್ ಮಾಡಿ ಖಚಿತಪಡಿಸಿದ್ದು, ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ಪುನೀತ್ ರಾಜ್‍ಕುಮಾರ್ ಅವರಿಗೆ ಮತ್ತೊಂದು ಸಿನಿಮಾ ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದಾರೆ. ಅಪ್ಪು ಸಹ ಇದನ್ನು ರೀ ಟ್ವೀಟ್ ಮಾಡಿದ್ದಾರೆ.
ಇನ್ನೂ ವಿಶೇಷ ಎಂಬಂತೆ ಈ ಸಿನಿಮಾಗೆ ಯು ಟರ್ನ್ ಖ್ಯಾತಿಯ ಪವನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಯಾವ ರೀತಿಯ ಸಿನಿಮಾ ಇರಬಹುದು, ಥ್ರಿಲ್ಲರ್ ಮೂವಿನಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ಆದರೆ ಚಿತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‍ಡೇಟ್ ಸಿಗಲಿದೆ. ನಿರ್ದೇಶಕ ಪವನ್ ಕುಮಾರ್ ಅವರು ಯು ಟರ್ನ್ ಹಾಗೂ ಲೂಸಿಯಾ ಸಿನಿಮಾಗಳ ಮೂಲಕ ಪರಿಚಿತರಾಗಿದ್ದಾರೆ, ಹೀಗಾಗಿ ನಿರೀಕ್ಷೆ ಹೆಚ್ಚಿದೆ.
ಇನ್ನೂ ಸಂತಸ ಸಂಗತಿ ಎಂದರೆ ಜುಲೈ ತಿಂಗಳಲ್ಲಿ ಪ್ರಿನ್ಸಿಪಲ್ ಫೋಟೋಗ್ರಫಿ ಆರಂಭವಾಗಲಿದೆ ಎಂದು ವಿಜಯ್ ಕಿರಗಂದೂರ್ ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಫೋಟೋ ಶೂಟ್ ಬಳಿಕ ಯಾವ ರೀತಿಯ ಸಿನಿಮಾ ಎಂಬ ಬಗ್ಗೆ ಸುಳಿವು ಸಿಗಲಿದೆಯೇ ಕಾದು ನೋಡಬೇಕಿದೆ. ಯುವರತ್ನ ಸಕ್ಸಸ್ ಬಳಿಕ ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪುನೀತ್ ರಾಜ್‍ಕುಮಾರ್, ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವ ಮೂಲಕ ಮತ್ತೆ ಬ್ಯುಸಿಯಾಗುತ್ತಿದ್ದಾರೆ.
https://twitter.com/VKiragandur/status/1381957699110195211?ref_src=twsrc%5Etfw%7Ctwcamp%5Etweetembed%7Ctwterm%5E1381957699110195211%7Ctwgr%5E%7Ctwcon%5Es1_c10&ref_url=https%3A%2F%2Fpublictv.in%2Fheavy-rain-in-vijayapura-bidar-belagavi-and-parts-of-north-karnataka%2F