Breaking News

ಕೆಲಸಕ್ಕೆ ಹಾಜರಾಗದಿದ್ದರೆ ಮಾರ್ಚ್ ತಿಂಗಳ ವೇತನ ಕಟ್ :ಬಿಎಂಟಿಸಿ ಎಂಡಿ ಶಿಖಾ

Spread the love

ಬೆಂಗಳೂರು : ರಾಜ್ಯಾದ್ಯಂತ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗದೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ‌. ಇದರ ಪರಿಣಾಮ 135 ಬಸ್​ಗಳು ಮಾತ್ರ ಇವತ್ತು ಸಂಚಾರ ಮಾಡುತ್ತಿವೆ. ನಗರದ ಯಶವಂತಪುರ ಬಸ್​ ನಿಲ್ದಾಣಕ್ಕೆ ಬಿಎಂಟಿಸಿ ಎಂಡಿ ಶಿಖಾ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮಾತಾನಾಡಿದ ಅವರು, ಬೆಂಗಳೂರಿನಲ್ಲಿ ಈವರೆಗೆ 135 ಬಿಎಂಟಿಸಿ ಬಸ್​ಗಳು ಮಾತ್ರ ಸಂಚರಿಸುತ್ತಿವೆ.

ಮಂಗಳವಾರದ ಸಭೆಯಲ್ಲಿನ ತೀರ್ಮಾನದಂತೆ ಪರ್ಯಾಯವಾಗಿ ಖಾಸಗಿ ಬಸ್​ಗಳನ್ನ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸ್ವಲ್ಪ ಅನುಕೂಲವಾಗಿದೆ. ಬಿಎಂಟಿಸಿ ವತಿಯಿಂದಲೂ ಪ್ರಮುಖ ನಿಲ್ದಾಣ, ಟರ್ಮಿನಲ್, ಜಂಕ್ಷನ್​ನಲ್ಲಿ ಅಧಿಕಾರಿಗಳನ್ನ ನೇಮಿಸಲಾಗಿದ್ದು, ಖಾಸಗಿ ಬಸ್​ನವರಿಗೆ ಮಾರ್ಗಸೂಚಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಈವರೆಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ. ಜನರಿಗೂ ಮೊದಲ ಮುಷ್ಕರದ ಮಾಹಿತಿ ಇದ್ದ ಕಾರಣ ಸ್ವಂತ ವಾಹನಗಳ ಮೊರೆ ಹೋಗಿದ್ದಾರೆ. ಕಳೆದ ಬಾರಿಯಂತೆ ಈ ಸಲ ಯಾವುದೇ ಪ್ರಯಾಣಿಕರ ದಟ್ಟನೆ ಸಮಸ್ಯೆ ಆಗಿಲ್ಲ ಎಂದರು.


Spread the love

About Laxminews 24x7

Check Also

ಮೆಟ್ರೋ ದರ ನಿಗದಿ ಸಮಿತಿ ಸಲ್ಲಿಸಿದ ವರದಿ ಬಹಿರಂಗಪಡಿಸಲು ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Spread the loveಬೆಂಗಳೂರು: ಬೆಂಗಳೂರು ಮೆಟ್ರೋ ರೈಲಿನ ಟಿಕೆಟ್ ದರ ಹೆಚ್ಚಳ ಸಂಬಂಧ ನಿವೃತ್ತ ನ್ಯಾಯಮೂರ್ತಿ ತರಿಣಿ ನೇತೃತ್ವದ ದರ ನಿಗದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ