ಚೆನ್ನೈ: ಮತಗಟ್ಟೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಮಾಸ್ಕ್ ಧರಿಸದ ಅಭಿಮಾನಿಯೊಬ್ಬರ ಫೋನ್ ನ್ನು ಕಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕಸಿದುಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಚೆನ್ನೈ ಪಕ್ಕದಲ್ಲಿರುವ ತಿರುವಣ್ ಮಿಯೂರ್ ನ ಮತಗಟ್ಟೆಯೊಂದರ ಬಳಿ ಇಂದು ಬೆಳಗ್ಗೆ ಪತ್ನಿ ಶಾಲಿನಿ ಜೊತೆಗೆ ಮತದಾನ ಮಾಡಲು ವಿಜಯ್ ಬಂದಾಗ ಈ ಘಟನೆ ನಡೆದಿದೆ. ವಿಡಿಯೋ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ. ಅಜಿತ್ ಅವರ ಒಪ್ಪಿಗೆ ಇಲ್ಲದೆ ಅವರ ಬಳಿಗೆ ತೆರಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಮಾಸ್ಕ್ ಧರಿಸದ ಅಭಿಮಾನಿಯೊಬ್ಬರ ಫೋನ್ ನ್ನು ಅಜಿತ್ ಕಿತ್ತುಕೊಂಡಿದ್ದಾರೆ. ನಂತರ ಎಚ್ಚರಿಕೆ ನೀಡುವ ಮೂಲಕ ಫೋನ್ ನ್ನು ವಾಪಸ್ ನೀಡಿದ್ದಾರೆ.
ಈ ವಿಡಿಯೋಗೆ ಟ್ವಿಟರ್ ನಲ್ಲಿ ಪರ- ವಿರುದ್ಧವಾದ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೋವಿಡ್-19 ನಿಯಮ ಪಾಲಿಸದವರನ್ನು ತನ್ನ ಬಳಿಗೆ ಸೇರಿಸದ ಅಜಿತ್ ಅವರನ್ನು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟಿವಿ ನಟಿ ದಿವ್ಯಾ ದರ್ಶಿನಿ ಕೂಡಾ ಅಜಿತ್ ಪರ ಟ್ವೀಟ್ ಮಾಡಿದ್ದಾರೆ.
ಆದರೆ, ದಳಪತಿ ವಿಜಯ್ ಅಭಿಮಾನಿಗಳು ಇದನ್ನ ತಮ್ಮ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದು, ತೀವ್ರತರವಾದ ಟೀಕೆಗಳನ್ನು ಮಾಡುತ್ತಿದ್ದಾರೆ. ಅಜಿತ್ ಅವರು ಇಂದು ನಡೆದುಕೊಂಡು ರೀತಿ ಸರಿಯಾಗಿರಲಿಲ್ಲ ಎಂದು ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ.
Thala ❤️ https://t.co/jqcNNQqO89
— Thala Mukesh ツ (@ThalaMukeshOffl) April 6, 2021
Laxmi News 24×7