Breaking News

ಮದುವೆಗೂ ಮುಂಚೆ ಗರ್ಭಿಣಿ: ಪ್ರಶ್ನೆ ಮಾಡಿದವಗೆ ಪ್ರತ್ಯುತ್ತರ ನೀಡಿದ ನಟಿ

Spread the love

ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ನಟಿ ದಿಯಾ ಮಿರ್ಜಾ ಕೆಲವು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣದಲ್ಲಿ ಸಂತಸದ ಸುದ್ದಿ ಹಂಚಿಕೊಂಡಿದ್ದರು.

ನಟಿ ದಿಯಾ ಮಿರ್ಜಾ ಫೆಬ್ರವರಿ 15 ರಂದು ಎರಡನೇ ಬಾರಿ ವಿವಾಹವಾಗಿದ್ದಾರೆ. ವಿವಾಹವಾದ ಕೆಲವೇ ದಿನಗಳ ಬಳಿಕ ತಾವು ತಾಯಿಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. ಆದರೆ ದಿಯಾ ಹಾಕಿರುವ ಪೋಸ್ಟ್‌ಗೆ ಕೆಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ದಿಯಾರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬ ‘ಗರ್ಭಿಣಿ ಆದ ನಂತರ ಮದುವೆ ಆಗಿದ್ದೀರಿ. ಗರ್ಭಿಣಿ ಆಗಿರುವುದನ್ನು ಮದುವೆಗೆ ಮುಂಚೆಯೇ ಏಕೆ ಘೋಷಿಸಲಿಲ್ಲ?’ ಎಂದು ಪ್ರಶ್ನೆ ಮಾಡಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ದಿಯಾ ಮಿರ್ಜಾ, ‘ಆಸಕ್ತಿಕರ ಪ್ರಶ್ನೆ ಇದು. ನಾವು ಪೋಷಕರಾಗುತ್ತಿದ್ದೇವೆ ಎಂಬ ಕಾರಣಕ್ಕೆ ಮದುವೆ ಆಗಲಿಲ್ಲ. ಮದುವೆಯ ತಯಾರಿಯಲ್ಲಿದ್ದಾಗ ನಾನು ಗರ್ಭಿಣಿ ಆಗಿರುವುದು ಗೊತ್ತಾಯಿತು. ಗರ್ಭಿಣಿ ಆಗಿದ್ದಕ್ಕೆ ನಾವು ಮದುವೆ ಆಗಲಿಲ್ಲ’ ಎಂದಿದ್ದಾರೆ ದಿಯಾ.

‘ಪೋಷಕರಾಗುತ್ತಿರುವುದಾಗಿ ನಾವು ಮೊದಲೇ ಘೋಷಿಸಬಹುದಿತ್ತು. ಆದರೆ ವೈದ್ಯಕೀಯ ಕಾರಣಗಳಿಂದಾಗಿ ನಾವು ತಡವಾಗಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡೆವು. ಈ ಸಂದರ್ಭಕ್ಕಾಗಿ ಹಲವು ವರ್ಷಗಳಿಂದ ನಾನು ಕಾದಿದ್ದೇನೆ. ವೈದ್ಯಕೀಯ ಕಾರಣವಲ್ಲದೆ ಬೇರಾವುದೇ ಕಾರಣದಿಂದಲೂ ನಾನು ಈ ವಿಷಯವನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ ದಿಯಾ.

 

ನಟಿ ದಿಯಾ ಮಿರ್ಜಾ 2014 ರಲ್ಲಿ ಸಾಹಿಲ್ ಸಂಗಾ ಅವರೊಟ್ಟಿಗೆ ವಿವಾಹವಾಗಿದ್ದರು. ಈ ಜೋಡಿ 2019 ರಲ್ಲಿ ಬೇರಾದರು. ನಂತರ ಫೆಬ್ರವರಿ 15 ರಂದು ವೈಭವ್ ರೇಖಿ ಅವರೊಟ್ಟಿಗೆ ದಿಯಾ ವಿವಾಹವಾಗಿದ್ದಾರೆ. ಈಗ ಈ ಇಬ್ಬರೂ ಪೋಷಕರಾಗುತ್ತಿದ್ದಾರೆ. ದಿಯಾ ಮಿರ್ಜಾಗೆ ಇದು ಮೊದಲ ಮಗು.


Spread the love

About Laxminews 24x7

Check Also

ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಈ ವರ್ಷ ರಾಜ್ಯಾದ್ಯಂತ ವಿಸ್ತರಣೆ: ಸಚಿವ ದಿನೇಶ್ ಗುಂಡೂರಾವ್

Spread the loveಬೆಂಗಳೂರು: ಹೃದಯಾಘಾತದಿಂದ ಮರಣವಾಗುವವರ ಸಂಖ್ಯೆ ಅಧಿಕವಾಗುತ್ತಿದ್ದು, ಇದನ್ನ ನಿಯಂತ್ರಿಸಲು ಈ ವರ್ಷದಿಂದಲೇ ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ