Breaking News

ಏರ್​ಪೋರ್ಟ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಟ್ಯಾಕ್ಸಿ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವು

Spread the love

ಬೆಂಗಳೂರು: ದಿನಪೂರ್ತಿ ದುಡಿದರೂ ಹಸಿವು ನೀಗುವಷ್ಟು ಸಂಪಾದಿಸಲಾಗದಿರುವ ಸಂಕಷ್ಟದಿಂದ ನೊಂದು ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಟ್ಯಾಕ್ಸಿ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ನಿನ್ನೆ ಟ್ಯಾಕ್ಸಿ ಚಾಲಕ ಪ್ರತಾಪ್ ಏರ್​ಪೋರ್ಟ್​ನಲ್ಲಿ ಪೆಟ್ರೋಲ್ ಸುರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಶೇ.70 ಸುಟ್ಟ ಗಾಯಗಳಿಂದ ಪ್ರತಾಪ್ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತಡರಾತ್ರಿ‌ ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್ ಸಾವನ್ನಪ್ಪಿದ್ದಾರೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಏರ್​​ಪೋರ್ಟ್​ನ​ ಟ್ಯಾಕ್ಸಿ ಚಾಲಕ ಪ್ರತಾಪ್ ಸುಮಾರು ಹತ್ತು ವರ್ಷದಿಂದ ಚಾಲಕನಾಗಿ ಕೆಲಸಮಾಡುತ್ತಿದ್ದರು. ಇತ್ತೀಚಿಗೆ ಪ್ರತಿ ನಿತ್ಯ 300 ರೂಪಾಯಿ ಸಂಪಾದನೆ ಆಗುತ್ತಿತ್ತು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಪ್ರತಾಪ್,​ ಏರ್​ಪೋರ್ಟ್​ ಪಿಕ್​ಅಪ್​ ಪಾಯಿಂಟ್​ನಲ್ಲಿ ಕಾರಿನೊಳಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಪ್ರತಾಪ್ ಸಾವಿನ ಬೆನಲ್ಲೇ ವಿಕ್ಟೋರಿಯಾ ಮುಂದೆ ಜಮಾಯಿಸಿರುವ ಇತರೇ ಚಾಲಕರು, ಪ್ರತಾಪ್ ಸಾವನ್ನಾದ್ರೂ‌ ನೋಡಿ‌ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ: ಇಡಿ ಅಧಿಕಾರಿಗಳೆಂದು ಹೇಳಿಕೊಂಡು ಬಂಗಾರ, ಹಣ ದೋಚಿದ ಆರೋಪಿಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು

Spread the loveಹುಬ್ಬಳ್ಳಿ: ಕಳೆದ ಒಂದು ವಾರದ ಹಿಂದೆ (ನವೆಂಬರ್ 19 ) ಇಡಿ ಅಧಿಕಾರಿಗಳೆಂದು ಹೇಳಿಕೊಂಡು, ಮೂರು ಕೋಟಿ ರೂಪಾಯಿಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ