ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿ, ಕಲಾಪಕ್ಕೂ ಕಲ್ಲು ಹಾಕಿದ, ಮಾಜಿ ಸಚಿವ ರಮೇಶ ಜಾರಕಿಹೊಳಿ ಸೇಕ್ಸ್ ಸಿಡಿ ಕೇಸ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಹೌದು ಸತತ ಹದಿನೈದು ದಿನಗಳ ಸತತ ಕಾರ್ಯಾಚರಣೆ ಬಳಿಕ ಜಾರಕಿಹೊಳಿ ಸಿ.ಡಿ. ಪ್ರಕರಣದ ಅಸಲಿ ವಿಡಿಯೋ ಪತ್ತೆ ಹಚ್ಚುವಲ್ಲಿ ವಿಶೇಷ ತನಿಖಾ ದಳ (ಎಸ್ ಐಟಿ) ಯಶಸ್ಸು ಕಂಡಿದೆ. ಯುವತಿಯ ವ್ಯಾನಿಟಿ ಬ್ಯಾಗ್ ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಯೇ ಖಾಸಗಿ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.
ಇದರೊಂದಿಗೆ ಲೈಂಗಿಕ ವಿವಾದದ ತನಿಖೆಗೆ ಮಹತ್ವದ ತಿರುವು ಸಿಕ್ಕಂತಾಗಿದ್ದು, ಯುವತಿಯ ಪರಿಚಯವೇ ಇಲ್ಲ ಎನ್ನುತ್ತಿದ್ದ ಮಾಜಿ ಸಚಿವರಿಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಈ ಅಸಲಿ ವಿಡಿಯೋದಲ್ಲಿ ಬೆಂಗಳೂರಿನ ಐಷಾರಾಮಿ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ವೊಂದರಲ್ಲಿ ಮಾಜಿ ಸಚಿವರೊಂದಿಗೆ ವಿವಾದಿತ ಯುವತಿ ಕಳೆದಿದ್ದಾಳೆ ಎನ್ನಲಾದ ಖಾಸಗಿ ಕ್ಷಣಗಳು ಪತ್ತೆಯಾಗಿವೆ. ಅಲ್ಲದೆ ಸಿ.ಡಿ. ಸ್ಫೋಟ ತಂಡದ ಪ್ರಮುಖ ಸೂತ್ರಧಾರ ಎನ್ನಲಾದ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತ ಶ್ರವಣ್ ಜತೆ ಯುವತಿಯ ಸಂಭಾಷಣೆ ತುಣುಕು ಕೂಡ ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಪೂರ್ವ ಯೋಜಿತವಾಗಿ ಮಾಜಿ ಸಚಿವರೊಂದಿಗೆ ಸಲುಗೆ ಬೆಳೆಸಿ ಬಳಿಕ ಅವರನ್ನು ಶಂಕಿತ ಆರೋಪಿಗಳು ಹನಿಟ್ರ್ಯಾಪ್ ಬಲೆಗೆ ಬೀಳಿಸಿರಬಹುದು ಎಂಬ ಶಂಕೆಯನ್ನು ಎಸ್ ಐಟಿ ವ್ಯಕ್ತಪಡಿಸಿದೆ. ಈ ಅಸಲಿ ವಿಡಿಯೋವನ್ನು ಸಾಚಾತನದ ಪರೀಕ್ಷೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಅಧಿಕಾರಿಗಳು ಕಳುಹಿಸಿದ್ದಾರೆ ಎನ್ನಲಾಗಿದೆ.
ಅದುಕೊಂಡ ಕೆಲಸ ಮುಗಿಯುತ್ತಿದ್ದಂತೆ ಫ್ಲ್ಯಾಟ್ ನಿಂದ ಹೊರಬಂದ ಯುವತಿ, ಶ್ರವಣ್ ಗೆ ಅಂದುಕೊಂಡಂತೆ ಕೆಲಸ ಮುಗಿದಿದೆ ಎಂದು ಹೇಳಿ ಕ್ಯಾಮೆರಾವನ್ನು ಹಸ್ತಾಂತರಿಸಿದ್ದ ವಿಡಿಯೋ ದೃಶ್ಯಾವಳಿಗಳು ಪತ್ತೆಯಾಗಿವೆ ಎನ್ನಲಾಗಿದೆ.
Laxmi News 24×7