ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದ್ದು, ಈ ನಡುವೆ ಜನತೆಗೆ ತಜ್ಞರು ಬಿಗ್ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್ ಜುಲೈ ವರೆಗೂ ಕಾಡುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಅತಂಕ ಮತ್ತಷ್ಟು ಹೆಚ್ಚಲಿದ್ದು, ಈ ಹಿನ್ನೆಲೆಯಲ್ಲಿ ಜನರು ಹೆಚ್ಚು ಜಾಗರೂಕರಾಗಿ ಇರಬೇಕು. ಹೊರಗಡೆ ಸುತ್ತಾಟ ಕಡಿಮೆ ಮಾಡಬೇಕು. ರಾಜ್ಯದಲ್ಲಿ ಇದೀಗ ಕೊರೊನಾ 2 ನೇ ಶುರುವಾಗಿದ್ದು, 2ನೇ ಅಲೆ ಜುಲೈ ವರೆಗೂ ಕಾಡಲಿದೆ ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಹೇಳಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಕೊರೊನಾ ಮೊದಲನೆ ಅಲೆಯಲ್ಲೂ ತೀವ್ರತೆ ಹೆಚ್ಚಾಗಿತ್ತು. ಮಾರ್ಚ್ ನಿಂದ ಅಗಸ್ಟ್ ವರೆಗೆ ಕೊರೊನಾ ವೈರಸ್ ಅಬ್ಬರ ಹೆಚ್ಚಾಗಿತ್ತು. ಈಗ 2 ನೇ ಅಲೆ ವೈರಸ್ ಜುಲೈ ವರೆಗೂ ಜನರಿಗೆ ಕಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
Laxmi News 24×7