Breaking News

ಇನ್ಮುಂದೆ ‘ಸರ್ಕಾರಿ ನೌಕರ’ರಿಗೆ ವಾರದಲ್ಲಿ 4 ದಿನ ಕೆಲಸ ‘3 ದಿನ’ ರಜೆ.?

Spread the love

ನವದೆಹಲಿ : ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಕೆಲಸದ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮುಂದುವರೆದ ಭಾಗವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಇನ್ಮುಂದೆ ವಾರದಲ್ಲಿ 4 ದಿನ ಮಾತ್ರ ಕೆಲಸ ಮಾಡಿ, ಮೂರು ದಿನ ರಜೆ ನೀಡಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿದೆ. ಇಂತಹ ಊಹಾಪೋಹಳಿಗೆ ಕೇಂದ್ರ ಕಾರ್ಮಿಕ ಸಚಿವರು ಸಂಸತ್ ನಲ್ಲಿ ಕೇಳಲಾದ ಪ್ರಶ್ನೆಗೆ ಏನ್ ಉತ್ತರಿಸಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ..

ದೇಶದಲ್ಲಿ ಕೆಲವು ದಿನಗಳಿಂದ, ಮುಂಬರುವ ದಿನಗಳಲ್ಲಿ ವಾರದಲ್ಲಿ ನಾಲ್ಕು ದಿನ ಮಾತ್ರ ಸರ್ಕಾರಿ ನೌಕರರು ಕೆಲಸ ಮಾಡಿ, 3 ದಿನ ರಜೆ ನೀಡಲಾಗುತ್ತಿದೆ. ಇಂತಹ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಎಂಬುದಾಗಿ ಹೇಳಲಾಗುತ್ತಿತ್ತು.

ಈ ಕುರಿತಂತೆ ಬುಧವಾರ ಲೋಕಸಭೆಯಲ್ಲಿ ಕೇಳಿದಂತ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು, ‘ಕೇಂದ್ರ ಸರ್ಕಾರದ ಅಧಿಕಾರಿಗಳು ವಾರದಲ್ಲಿ ನಾಲ್ಕು ದಿನ ಅಥವಾ 40 ಗಂಟೆಗಳ ಕಾಲ ಕೆಲಸ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುವ ಯಾವುದೇ ಪ್ರಸ್ತಾಪ ಇಲ್ಲ’ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಅಂದಹಾಗೇ ಈ ಮೊದಲು ಹೊಸ ಕಾರ್ಮಿಕ ಕಾನೂನುಗಳ ಪ್ರಕಾರ, ಮುಂಬರುವ ದಿನಗಳಲ್ಲಿ ವಾರದಲ್ಲಿ ಮೂರು ದಿನ ಅವಕಾಶ ಕಲ್ಪಿಸಲಾಗಿದೆ ಎಂದು ವರದಿಯಾಗಿತ್ತು. ಕಾರ್ಮಿಕ ಸಚಿವಾಲಯದ ಪ್ರಕಾರ, ಕೇಂದ್ರ ಸರ್ಕಾರ ವಾರದಲ್ಲಿ ನಾಲ್ಕು ದಿನ ಮತ್ತು ಮೂರು ದಿನ ವೇತನ ಸಹಿತ ರಜೆ ನೀಡಲು ಸಿದ್ಧತೆ ನಡೆಸಿದೆ. ಹೊಸ ಲೇಬರ್ ಕೋಡ್ ನಲ್ಲಿ ಕಂಪನಿ ಮತ್ತು ಉದ್ಯೋಗಿಗಳು ಪರಸ್ಪರ ಒಪ್ಪಿಗೆಯೊಂದಿಗೆ ನಿರ್ಧಾರ ತೆಗೆದುಕೊಳ್ಳಬಹುದಾದ ನಿಯಮಗಳಲ್ಲಿ ಈ ಆಯ್ಕೆಗಳು ಕೂಡ ಇವೆ ಎಂದು ಹೇಳಲಾಗುತ್ತಿತ್ತು.

 

ಹೊಸ ನಿಯಮಗಳ ಪ್ರಕಾರ, ಕೆಲಸದ ಅವಧಿಯನ್ನು 12ಕ್ಕೆ ಏರಿಸಲು ಸರ್ಕಾರ ಅವಕಾಶ ನೀಡಿದೆ. ಕೆಲಸದ ಸಮಯದಲ್ಲಿ ಗರಿಷ್ಠ ಮಿತಿ 48, ಆದ್ದರಿಂದ ಕೆಲಸದ ದಿನಗಳ ವ್ಯಾಪ್ತಿಯನ್ನು ಐದರಿಂದ ಕಡಿಮೆ ಮಾಡಬಹುದು ಎನ್ನಲಾಗುತ್ತಿತ್ತು. ಆದ್ರೇ ಇಂತಹ ಊಹಾಪೋಹಗಳಿಗೆ ಈಗ ಕೇಂದ್ರ ಕಾರ್ಮಿಕ ಸಚಿವರು ತೆರೆ ಎಳೆದಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ