Breaking News

ನಿನಗೆ ತಾಕತ್ತಿದ್ದರೆ ಸಿಎಂ ಬದಲಾವಣೆ ಮಾಡಿ ತೋರಿಸು: ಯತ್ನಾಳ್‍ಗೆ ರೇಣುಕಾಚಾರ್ಯ ಸವಾಲ್

Spread the love

ದಾವಣಗೆರೆ: ನಿನಗೆ ಸವಾಲು​ ಹಾಕ್ತೀನಿ.. ತಾಕತ್ತಿದ್ದರೆ ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡಿ ನೋಡು ಅಂತ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳೆಗೆ ಸವಾಲೆಸೆದಿದ್ದಾರೆ.

ಪಂಚರಾಜ್ಯಗಳ ಚುನಾವಣೆಯ ನಂತರ ನೂರಕ್ಕೆ ನೂರರಷ್ಟು ಸಿಎಂ ಬದಲಾವಣೆ ಖಚಿತ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ರೇಣುಕಾಚಾರ್ಯ ಏಕವಚನದಲ್ಲೇ​​ ಯತ್ನಾಳ್​ ವಿರುದ್ಧ ಕಿಡಿಕಾರಿದ್ದಾರೆ. ​ರಾಜ್ಯದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ, ಅನಂತಕುಮಾರ್​. ಯಡಿಯೂರಪ್ಪನವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಅಮಿತ್​ ಶಾ.. ನೀನಲ್ಲ. ನೀನು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀಯ, ನೀನೇ ದೊಡ್ಡ ಭ್ರಷ್ಠ. ಹೆಂಡತಿ ಮಕ್ಕಳನ್ನ ಹೊರಗೆ ಕಳುಹಿಸಿ ರಾಜಕೀಯ ಮಾಡು ನೋಡಣ, ನೀನೇನು ಒರಿಜಿನಲ್​ ಬಿಜೆಪಿಯವನಾ..? ನೀನು ಕಾಂಗ್ರೇಸ್​ ಏಜೆಂಟ್​ನ ಹಾಗೆ ಮಾತನಾಡುತಿದ್ದೀಯಾ, ನಿನ್ನ ಹೇಳಿಕೆಗಳ ಹಿಂದೆ ಕಾಂಗ್ರೆಸ್​ನವರ ಕೈವಾಡವಿದೆ ಎಂದು ಹರಿಹಾಯ್ದರು

ವಿಧಾನಸಭೆ ಮೊಗಸಾಲೆಯಲ್ಲಿ 20 ರಿಂದ 25 ಜನ ಶಾಸಕರು ಕುಳಿತು ಮಾತನಾಡಿದ್ದೇವೆ, ಯತ್ನಾಳ್​ರನ್ನ ಬಿಜೆಪಿಯಿಂದ ಉಚ್ಛಾಟನೆ ಮಾಡಲು ನಾನು ಒತ್ತಾಯ ಮಾಡಿದ್ದೇನೆ. ನಾಳೆ ಸೋಮವಾರ ಎಲ್ಲಾ ಶಾಸಕರು ಸೇರುತ್ತೇವೆ. ನಿನಗೆ ಸರಿಯಾದ ಉತ್ತರವನ್ನ ಕೊಡುತ್ತೇವೆ. ನಿನಗೆ ತಾಖತ್​ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಗೆದ್ದು ಬಾ ನೋಡೋಣ ಎಂದು ಏಕವಚನದಲ್ಲಿ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ರು.


Spread the love

About Laxminews 24x7

Check Also

ಕರ್ನಾಟಕದ ಶಾಲೆಗಳಲ್ಲಿ U ಶೇಪ್​ನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಗೆ ಒತ್ತಾಯ: ಸಚಿವ ಮಧು ಬಂಗಾರಪ್ಪಗೆ ಪತ್ರ

Spread the loveಬೆಂಗಳೂರು, ಜುಲೈ 16: ಇನ್ಮುಂದೆ ಶಾಲೆಗಳಲ್ಲಿ ಲಾಸ್ಟ್ ಬೆಂಚ್, ಫಸ್ಟ್ ಬೆಂಚ್​ ವಿದ್ಯಾರ್ಥಿಗಳು ಎಂಬ ವಿಧಾನಕ್ಕೆ ಬ್ರೇಕ್ ಬೀಳುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ