ಬೆಳಗಾವಿ : ಒಂದೇ ಕುಟುಂಬದ 19 ಮಂದಿಗೆ ಕರೋನ ಸೊಂಕು ಕಂಡು ಬಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ, ರಾಯಭಾಗ ತಾಲೂಕಿನ ಸೌಂದತ್ತಿ ಗ್ರಾಮದ ಒಂದೇ ಕುಟುಂಬದ 19 ಮಂದಿಗೆ ಕರೋನ ಸೊಂಕು ಈಡಾಗಿದ್ದಾರೆ ಎನ್ನಲಾಗಿದ್ದು, ಮಹಾರಾಷ್ಟ್ರದಲ್ಲಿ ನಡೆದ ಸಂಬಂಧರಿಕರ ಕಾರ್ಯಕ್ರಮವೊಂದರಲ್ಲಿ ಈ ಕುಟಂಬ ಭಾಗವಹಿಸಿ ವಾಪಸ್ಸು ತಮ್ಮೂರಿಗೆ ಬಂದಿತ್ತು, ಈ ವೇಳೆ ಅವರಿಗೆ ಕರೋನ ಟೆಸ್ಟ್ ಮಾಡಿಸಲಾಗಿದೆ. ನಿನ್ನೆ ಕುಟಂಬದ ಐವರಿಗೆ ಕರೋನ ಸೊಂಕು ಇರೋದು ದೃಡಪಟ್ಟಿದ್ದು, ಇಂದು 14 ಮಂದಿಗೆ ಕರೋನ ಸೊಂಕು ಇರೋದು ಧೃಡಪಟ್ಟಿದೆ. ಇದಲ್ಲದೇ ಮುಂಜಾಗ್ರತ ಕ್ರಮವಾಗಿ ಸೌಂದತ್ತಿ ಗ್ರಾಮದ ಸಂತೆ ಜಾತ್ರೆ ರದ್ದು ಮಾಡಲಾಗಿದೆ ಅಂತ ಜಿಲ್ಲಾಡಳಿತ ತಿಳಿಸಿದೆ.
ಮಹಾರಾಷ್ಟ್ರ, ಕೇರಳ, ಪಕ್ಕದ ಆಂದ್ರದಲ್ಲಿ ಕೂಡ ದಿನದಿಂದ ದಿನಕ್ಕೆ ಕರೋನ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಈ ರಾಜ್ಯಗಳ ಗಡಿ ಭಾಗದಲ್ಲಿ ತಪಾಸಣಾ ಶಿಬಿರವನ್ನು ತೆರೆದಿದ್ದು, ಈ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 74 ತಾಸುಗಳಲ್ಲಿ ಮಾಡಿಸಿರುವ ಕರೋನ ಟೆಸ್ಟ್ ನೆಗೆಟಿವ್ ಇದ್ದರೆ ಮಾತ್ರ ಬರಲು ಅನುಮತಿ ನೀಡಲಾಗುತ್ತಿದೆ.
Laxmi News 24×7