Home / ರಾಷ್ಟ್ರೀಯ / ನಂಗೆ ಬೇಕು. ನಂಗೆ ಬೇಕು. ಮುಗಿಬಿದ್ದು ಮದ್ಯದಂಗಡಿ ಹರಾಜಿಗೆ ಬಂದ ಜನ- 510 ಕೋಟಿ ರೂ.ಗೆ ಸೇಲ್​!

ನಂಗೆ ಬೇಕು. ನಂಗೆ ಬೇಕು. ಮುಗಿಬಿದ್ದು ಮದ್ಯದಂಗಡಿ ಹರಾಜಿಗೆ ಬಂದ ಜನ- 510 ಕೋಟಿ ರೂ.ಗೆ ಸೇಲ್​!

Spread the love

ಹನುಮಾನ್‌ಗಢ (ರಾಜಸ್ಥಾನ): ವಸ್ತುಗಳನ್ನು, ಅಂಗಡಿಗಳನ್ನು ಹರಾಜು ಮಾಡುವುದು ದೊಡ್ಡ ವಿಷಯವೇನಲ್ಲ. ಕೆಲವೊಮ್ಮೆ ಅಚ್ಚರಿ ಎನ್ನುವಂಥ ದರದಲ್ಲಿ ಅವುಗಳು ಹರಾಜು ಆಗುವುದೂ ಇದೆ. ಅದರಲ್ಲಿಯೂ ದೇವರ ಸನ್ನಿಧಿಯಲ್ಲಿ ಇಟ್ಟಿರುವ ವಸ್ತುಗಳು 2-3 ಪಟ್ಟೆ ಹೆಚ್ಚಿಗೆ ಹಣಕ್ಕೆ ಹರಾಜಾಗುವುದು ಹೊಸ ವಿಷಯವೆನಲ್ಲ.
ಆದರೆ ಅಚ್ಚರಿಯೆಂದರೆ, ಇಲ್ಲೊಂದು ಮದ್ಯದಂಗಡಿ ಮಾಲೀಕರೇ ಶಾಕ್​ ಆಗುವಷ್ಟು ಹೆಚ್ಚುವರಿ ದರದಲ್ಲಿ ಹರಾಜು ಆಗಿದೆ.

ಅಂಥದ್ದೊಂದು ಅಚ್ಚರಿ ನಡೆದಿರುವುದು ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ನೋಹಾರ್​ ಎಂಬ ಗ್ರಾಮದ ಮದ್ಯದ ಅಂಗಡಿಯೊಂದು 510 ಕೋಟಿ ರೂ. ಗೆ ಹರಾಜಾಗಿದೆ ಎಂದರೆ ನಂಬುವಿರಾ? ನಂಬಲೇಬೇಕು. ಅಷ್ಟೇ ಏಕೆ? ಇದರ ಹರಾಜು ಆಗುತ್ತಿದೆ ಎಂದು ತಿಳಿದಾಗ ನಸುಕಿನಿಂದಲೇ ಬಿಡ್​ ಶುರುವಾಗಿ ಮುಗಿದದ್ದು ಮಾರನೆಯ ದಿನವಂತೆ!

ಈ ಅಂಗಡಿಯ ಮೂಲ ಬೆಲೆ 72 ಲಕ್ಷ ರೂಪಾಯಿ ಇದ್ದು, 510 ಕೋಟಿ ರೂಪಾಯಿಗೆ ಮಾರಾಟವಾಗಿದೆ.

ಅಷ್ಟಕ್ಕೂ ಅದೇನಪ್ಪ ಇದರ ವಿಶೇಷತೆ ಎಂದರೆ ಎಲ್ಲರೂ ಹೇಳುತ್ತಾರೆ ಏನೂ ಇಲ್ಲ. ಆದರೆ ಈ ಗ್ರಾಮದಲ್ಲಿ ಇರುವ ಅತ್ಯಂತ ಫೇಮಸ್​ ಮದ್ಯದಂಗಡಿ ಇದು. ಇಲ್ಲಿ ಎಲ್ಲಾ ವೆರೈಟಿಯ ಮದ್ಯಗಳು ಸಿಗುತ್ತವೆ ಎನ್ನುವುದು ಅವರ ಮಾತು.

ಬೆಳಗ್ಗೆ 72 ಲಕ್ಷ ರೂ.ಗಳಿಂದ ಪ್ರಾರಂಭವಾದ ಬಿಡ್ಡಿಂಗ್ ಮುಂದುವರಿಯುತ್ತಲೇ ಇತ್ತು. ಬಿಡ್‌ದಾರರು ಆ ಲಿಕ್ಕರ್‌ ಶಾಪ್‌ಗೆ ಹೆಚ್ಚು ಬೆಲೆಯನ್ನು ಉಲ್ಲೇಖಿಸುತ್ತಲೇ ಇದ್ದರು. ಇಡೀ ದಿನ ಮುಂದುವರಿದ ಬಿಡ್ಡಿಂಗ್, ಮಧ್ಯರಾತ್ರಿಯೂ ನಡೆದು ಮುಂಜಾನೆ 2 ಗಂಟೆಗೆ ಅಂತ್ಯಗೊಂಡಿದೆ.

ರಾಜಸ್ಥಾನದಲ್ಲಿ ಮದ್ಯದಂಗಡಿಗಳ ಹರಾಜು ಹೊಸ ಪರಿಕಲ್ಪನೆಯಲ್ಲ. ಇತ್ತೀಚೆಗೆ, ರಾಜ್ಯದಲ್ಲಿ ಇ-ಹರಾಜನ್ನು ಪುನಾರಂಭಿಸಲಾಗಿದೆ. ಅಂತಹ 7,000 ಕ್ಕೂ ಹೆಚ್ಚು ಅಂಗಡಿಗಳನ್ನು ಇದೇ ರೀತಿ ಹರಾಜು ಹಾಕಲಾಗುತ್ತದೆ. ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ವ್ಯವಸ್ಥೆಯನ್ನು ರದ್ದುಗೊಳಿಸಿದ್ದರು. ನಂತರ ಅಶೋಕ್‌ ಗೆಹ್ಲೋಟ್‌ ಮುಖ್ಯಮಂತ್ರಿಯಾದ ನಂತರ ಬಿಡ್ಡಿಂಗ್ ಪುನಃ ಪ್ರಾರಂಭವಾಗಿದೆ. ಕಿರಣ್ ಕನ್ವರ್ ಎನ್ನುವವರು 510 ಕೋಟಿ ಕೊಟ್ಟು ಖರೀದಿ ಮಾಡಿದ್ದಾರೆ.
ಇದಕ್ಕೆ ಮಾಲೀಕರು ಮಾತ್ರವಲ್ಲದೇ ಅಬಕಾರಿ ಇಲಾಖೆಯ ಅಧಿಕಾರಿಗಳೇ ಅಚ್ಚರಿಪಟ್ಟರಂತೆ.


Spread the love

About Laxminews 24x7

Check Also

ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ

Spread the love ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಿವಾಳಿ ಎದ್ದಿದೆ. ಹೀಗಾಗಿ ಜನರ ಮೇಲೆ ಪೆಟ್ರೋಲ್, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ