Breaking News

ಮುಂಬಯಿ ಎನ್‌ಸಿಬಿ ಅಧಿಕಾರಿಗಳು ಗೋವಾದ ಮೀರಾಮಾರ್ ಮತ್ತು ಆಜಗಾಂವನಲ್ಲಿ ದಾಳಿ ನಡೆಸಿ ಬೃಹತ್ ಪ್ರಮಾಣದ ಮಾದಕ ಪದಾರ್ಥಗಳನ್ನು ಜಫ್ತಿ ಮಾಡಿದ್ದಾರೆ.

Spread the love

ಪಣಜಿ: ಮುಂಬಯಿ ಎನ್‌ಸಿಬಿ ಅಧಿಕಾರಿಗಳು ಗೋವಾದ ಮೀರಾಮಾರ್ ಮತ್ತು ಆಜಗಾಂವನಲ್ಲಿ ದಾಳಿ ನಡೆಸಿ ಬೃಹತ್ ಪ್ರಮಾಣದ ಮಾದಕ ಪದಾರ್ಥಗಳನ್ನು ಜಫ್ತಿ ಮಾಡಿದ್ದಾರೆ.
ಈ ಕುರಿತಂತೆ ಕ್ಷೇತ್ರೀಯ ಸಂಚಾಲಕ ಸಮೀರ್ ವಾನಖೇಡೆ ಮಾಹಿತಿ ನೀಡಿ- ಮುಂಬಯಿ ಎನ್‌ಸಿಬಿ ಅಧಿಕಾರಿಗಳು ಮಾದಕ ಪದಾರ್ಥ ಪ್ರಕರಣವೊಂದರಲ್ಲಿ ಶಂಕಿತರ ಶೋಧ ಕಾರ್ಯ ಕೈಗೆತ್ತಿಕೊಂಡಿದ್ದರು. ಈ ಶಂಕಿತರು ಗೋವಾದಲ್ಲಿರುವ ಮಾಹಿತಿಯ ಮೇರೆಗೆ ಗೋವಾದ ಮೀರಾಮಾರ್ ಮತ್ತು ಆಜಗಾಂವನಲ್ಲಿ ದಾಳಿ ನಡೆಸಿದರು.

ಈ ಎರಡೂ ಸ್ಥಳಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮಾದಕ ಪದಾರ್ಥ ಜಫ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮಾದಕ ಪದಾರ್ಥ ಕಾಯ್ದೆ ಕಲಂ-೧೯೮೫ ರ ಅಡಿಯಲ್ಲಿ ಹಲವರನ್ನು ವಷಕ್ಕೆ ಪಡೆದು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ ಎಂಬ ಮಾಹಿತಿ ನೀಡಿದರು.


Spread the love

About Laxminews 24x7

Check Also

ಮೂನ್ನೂರು ರೂಪಾಯಿ ಹಣಕ್ಕಾಗಿ ಕಲ್ಲು ಎತ್ತಿ ಹಾಕಿ ಅಪರಿಚಿತ ವ್ಯಕ್ತಿಯ ಕೊಲೆ

Spread the loveಬಳ್ಳಾರಿ: ಕುಡಿದ ಮತ್ತಿನಲ್ಲಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬನ ಬಳಿ ಇದ್ದ ಮೂನ್ನೂರು ರೂಪಾಯಿ ಕಸಿದುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ