Breaking News

ಎಲ್ಲೆಲ್ಲೂ ಮಹಿಳೆಯರೇ: ನೈಋತ್ಯ ರೈಲ್ವೇಯಿಂದ ಸಂಪೂರ್ಣ ಸ್ತ್ರೀಮಯ ಮಹಿಳಾ ದಿನಾಚರಣೆ

Spread the love

ಬೆಂಗಳೂರು: ಇಂದು ಬೆಂಗಳೂರಿನಿಂದ ಬಸವ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದವರಿಗೆ ಒಂದು ವಿಶೇಷ ಕಾಣಿಸಿತ್ತು. ಅವರಿಗೆ ಆ ರೈಲಿನಲ್ಲಿ, ರೈಲ್ವೇ ನಿಲ್ದಾಣದಲ್ಲಿ ಎಲ್ಲ ಸಿಬ್ಬಂದಿ ಮಹಿಳೆಯರೇ ಆಗಿದ್ದರು. ಆ ಮೂಲಕ ನೈಋತ್ಯ ರೈಲ್ವೇ ಇಲಾಖೆ ವಿಶೇಷವಾಗಿ ಮಹಿಳಾ ದಿನವನ್ನು ಆಚರಿಸಿತು.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲ್ಯಾಟ್​ಫಾರಂ-8ರ ಮೂಲಕ ಬೆಳಗ್ಗೆ 11.15ಕ್ಕೆ ಬಾಗಲಕೋಟೆಗೆ ಹೊರಟ ಬಸವ ಎಕ್ಸ್‌ಪ್ರೆಸ್ ರೈಲಿನಲ್ಲಿ ಅದರ ಲೋಕೋ ಪೈಲಟ್, ಟಿಕೆಟ್ ಕಲೆಕ್ಟರ್ ಸೇರಿ ಎಲ್ಲ ಸಿಬ್ಬಂದಿ ಮಹಿಳೆಯರೇ ಇದ್ದರು. ಅದೇ ರೀತಿ ಮಧ್ಯಾಹ್ನ 12.15ರಿಂದ 1 ಗಂಟೆಯವರೆಗೆ ಕೆ.ಆರ್.ಪುರದ ರೈಲ್ವೆ ವೇರ್‌ಹೌಸ್‌ನ ಎಲ್ಲ ಕಾರ್ಯದ ನಿಯಂತ್ರಣವನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು.

ಮಹಿಳಾ ಸಿಬ್ಬಂದಿ ಇರುವ ರೈಲಿಗೆ ಮಹಿಳೆಯರಿಂದಲೇ ಹಸಿರು ನಿಶಾನೆ

ಅಡಿಷನಲ್ ಡಿವಿಷನಲ್ ರೈಲ್ವೇ ಮ್ಯಾನೇಜರ್ (ಅಡ್ಮಿನ್​) ಕುಸುಮಾ ಹರಿಪ್ರಸಾದ್ ಅವರು ಈ ರೈಲಿಗೆ ಹಸಿರು ನಿಶಾನೆ ತೋರಿದರು. ಸೀನಿಯರ್ ಡಿವಿಷನಲ್ ಸೆಕ್ಯುರಿಟಿ ಕಮಿಷನರ್ ದೇಬಶ್ಮಿತಾ ಚಟ್ಟೋಪಾಧ್ಯಾಯ ಬ್ಯಾನರ್ಜಿ ಹಾಗೂ ಇತರ ಮಹಿಳಾ ಅಧಿಕಾರಿಗಳು ಉಪಸ್ಥಿತರಿದ್ದರು. ಈ ರೈಲಿಗೆ ಶಿರೀಷಾ ಗಜಿನಿ ಲೋಕೋ ಪೈಲಟ್​, ಮಿನಿ ಮುಬಾರಕ್ ಅಸಿಸ್ಟೆಂಟ್​ ಲೋಕೋಪೈಲಟ್​, ರಿಚಾ ಮಣಿ ತ್ರಿಪಾಠಿ ಗಾರ್ಡ್ ಆಗಿದ್ದರು. ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ಸ್, ಕ್ಯಾರಿಯೇಜ್ ಆಯಂಡ್ ವ್ಯಾಗನ್, ಏರ್ ಕಂಡಿಷನ್​ ಮಾತ್ರವಲ್ಲದೆ ರೈಲ್ವೇ ಪ್ರೊಟೆಕ್ಷನ್​ ಫೋರ್ಸ್​​ ಸಿಬ್ಬಂದಿ ಕೂಡ ಮಹಿಳೆಯರೇ ಆಗಿದ್ದರು. ಹೀಗೆ ವಿಶೇಷವಾಗಿ ಮಹಿಳಾ ದಿನವನ್ನು ಆಚರಿಸಿದ ನೈಋತ್ಯ ರೈಲ್ವೇ ಇಲಾಖೆಯು ಆ ಕುರಿತ ದೃಶ್ಯಾವಳಿ ಇರುವ ವಿಡಿಯೋವೊಂದನ್ನು ಕೂಡ ಬಿಡುಗಡೆ ಮಾಡಿದೆ.ನ್ನಸಂದ್ರ- ಜೋಲಾರ್​ಪೆಟ್ಟೈ ನಡುವಿನ ಗೂಡ್ಸ್ ರೈಲಲ್ಲೂ ಎಲ್ಲ ಸಿಬ್ಬಂದಿ ಮಹಿಳೆಯರಾಗಿದ್ದು, ಇದಕ್ಕೆ ಕೆ.ಆರ್.ಪುರದಲ್ಲಿ ಹಸಿರು ನಿಶಾನೆ ತೋರಲಾಗಿತ್ತು. ನೈಋತ್ಯ ರೈಲ್ವೇಯ ಬೆಂಗಳೂರು ವಿಭಾಗದಲ್ಲಿ ಇರುವ 9957 ಸಿಬ್ಬಂದಿ ಪೈಕಿ 1135 ಮಂದಿ ಮಹಿಳೆಯರು ಎಂಬುದಾಗಿ ಇಲಾಖೆ ತಿಳಿಸಿದೆ


Spread the love

About Laxminews 24x7

Check Also

ದೇವೇಗೌಡರ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು

Spread the love ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ