Breaking News

ಮೂವರು ಖತರ್ನಾಕ್ ಕಳ್ಳರ ಬಂಧನ: 28 ಬೈಕ್ ಜಪ್ತಿ

Spread the love

ಕಲಬುರಗಿ:  ನಗರದ ವಿವಿಧ ಕಾಲೋನಿಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರನ್ನು ಸ್ಟೇಷನ್​ ಬಜಾರ್​​ ಠಾಣೆಯ ಪೊಲೀಸರು   ಬಂಧಿಸಿದ್ದಾರೆ.

ವಿಶ್ವನಾಥ್​ ಹಂಗರಗಿ (19), ಮಲ್ಲಿಕಾರ್ಜುನ್​ ಮಲಬುದ್ದಿ (23) ಹಾಗು ಭಗವಂತ ಪೂಜಾರಿ(22) ಬಂಧಿತರು.

ಆರೋಪಿ ಕಲಬುರಗಿ ನಗರದ ನಿವಾಸಿಗಳಾಗಿದ್ದು ಇಬ್ಬರು ಮೊಬೈಲ್​ ರಿಪೇರಿ ಕೆಲಸ ಮಾಡುತ್ತಿದ್ದರೆ, ಇನ್ನೋರ್ವ ವಿದ್ಯಾರ್ಥಿಯಾಗಿದ್ದ. ಕಳೆದ ಕೆಲ ದಿನಗಳಿಂದ ಮೂವರು ಸೇರಿ ಕಲಬುರಗಿ ನಗರದ ಖೂಬಾ ಪ್ಲಾಟ್​, ಸಿಐಬಿ ಕಾಲೋನಿ, ಗೊದುತಾಯಿ ನಗರ, ಸಾಯಿ ಮುಂದಿರ, ಸಂತೋಷ್​ ಕಾಲೋನಿ, ಬ್ರಹ್ಮಪೂರ, ಚೌಡೇಶ್ವರಿ ಕಾಲೋನಿ ಮತ್ತು ಸೂಪರ್​ ಮಾರ್ಕೆಟ್​ ಪ್ರದೇಶಗಳಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದರು‌.

ಈ ಸಂಬಂಧ ಸ್ಟೇಷನ್​ ಬಜಾರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಬೆನ್ನತ್ತಿಹೋದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ರೂಪಾಯಿ ಮೌಲ್ಯದ 28 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ