ಬೆಂಗಳೂರು: ನನ್ನ ಮೇಲೆ ಮತ್ತು ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಭದ್ರಾವತಿ ಶಾಸಕ ಸಂಗಮೇಶ್ ಅವರು ಸಿಎಂ ಮತ್ತು ಅವರ ಕುಟುಂಬದ ವಿರುದ್ಧ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿಯಲ್ಲಿ ಹೊನಲು ಬೆಳಕಿನ ಕಬ್ಬಡಿ ಪಂದ್ಯ ನಡೆಸಿದ್ದೆವು. ಬಹುಮಾನ ಕೊಡುವ ವೇಳೆ ಆರ್ ಎಸ್‌ಎಸ್ ಕಿತಾಪತಿ ನಡೆಸಿದ್ದು, ಧರ್ಮ, ಜಾತಿ ಮುಂದಿಟ್ಟು ಕಿತಾಪತಿ ಮಾಡಿದ್ದಾರೆ. ಆಟದಲ್ಲಿ ಧರ್ಮ,ಜಾತಿ ರಾಜಕೀಯ ತಂದಿದ್ದಾರೆ. ಕೋಮುಗಲಭೆ ಸೃಷ್ಠಿಗೆ ಮುಂದಾಗಿದ್ದರು. ಅಂದು ಅವರನ್ನು ಸಮಾಧಾನ ಮಾಡಿದ್ದೆವು. ಆದರೆ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ನನ್ನ ಮೇಲೆ ಕೊಲೆ ಯತ್ನ ಕೇಸು ದಾಖಲಿಸಿದ್ದಾರೆ. ಸಿಎಂ ಅವರ ಕುಟುಂಬದವರು ಕೇಸ್ ಹಾಕಿಸಿದ್ದಾರೆ ಎಂದು ಆರೋಪಿಸಿದರು.
ಭದ್ರಾವತಿಯಲ್ಲಿ ಬಿಜೆಪಿ ಬೇರಿಲ್ಲ. ಅದಕ್ಕೆ ಕೋಮು ಗಲಭೆ ಮಾಡಲು ಹೊರಟಿದ್ದಾರೆ. ಒಬ್ಬ ಶಾಸಕನ ಮೇಲೂ ಕೇಸ್ ಹಾಕಿದ್ದಾರೆ. ಆದರೆ ಅವರ ವಿರುದ್ಧ ದೂರು ಕೊಟ್ಟರೆ ಅರೆಸ್ಟ್ ಮಾಡಿಲ್ಲ. ತಾಕತ್ತಿದ್ದರೆ ಈಶ್ವರಪ್ಪ ಅವರನ್ನು ಜೈಲಿಗೆ ಕಳಿಸಲಿ ಎಂದರು.
Laxmi News 24×7