Breaking News
Home / ರಾಜ್ಯ / ಉದ್ಯೋಗಿಗಳಿಗೆ ಮಹತ್ವದ ಮಾಹಿತಿ : ಏಪ್ರಿಲ್ 1ರಿಂದ ಕೆಲಸದ ಅವಧಿ 12 ಗಂಟೆಗೆ ಹೆಚ್ಚಳ?

ಉದ್ಯೋಗಿಗಳಿಗೆ ಮಹತ್ವದ ಮಾಹಿತಿ : ಏಪ್ರಿಲ್ 1ರಿಂದ ಕೆಲಸದ ಅವಧಿ 12 ಗಂಟೆಗೆ ಹೆಚ್ಚಳ?

Spread the love

ನವದೆಹಲಿ: ಕಚೇರಿಗಳಲ್ಲಿ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಬಹುದು ಎನ್ನಲಾಗಿದ್ದು, ಅಂದ ಹಾಗೇ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಏಪ್ರಿಲ್ 1ರಿಂದ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಜಾರಿಗೆ ತರುತ್ತಿದ್ದು, ಇದರಿಂದ ದುಡಿಯುವ ಜನರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಿದ ವೇತನ ಸಂಹಿತೆ ಮಸೂದೆಯಲ್ಲಿ ಮಂಡಿಸಲಾದ ಬದಲಾವಣೆಗಳ ಭಾಗವೇ ಇದಾಗಿದೆ. ಅಂದ ಹಾಗೇ ಹೊಸ ಕಾನೂನಿನ ಪ್ರಕಾರ, 15-30 ನಿಮಿಷಗಳ ಹೆಚ್ಚುವರಿ ಕೆಲಸವು ಓವರ್ ಟೈಮ್ ಆಗಿ ಅರ್ಹತೆ ಯನ್ನು ಪಡೆಯುತ್ತಿತ್ತು. ಪ್ರಸ್ತುತ, 30 ನಿಮಿಷಕ್ಕಿಂತ ಕಡಿಮೆ ಹೆಚ್ಚುವರಿ ಕೆಲಸವನ್ನು ಓವರ್ ಟೈಮ್ ಗಾಗಿ ಪರಿಗಣಿಸಲಾಗುವುದಿಲ್ಲ. ಹೊಸ ನಿಯಮದಲ್ಲಿ ಪ್ರತಿ ಐದು ಗಂಟೆಗಳ ಕೆಲಸದ ನಂತರ ಉದ್ಯೋಗಿಗಳಿಗೆ ಅರ್ಧ ಗಂಟೆ ವಿರಾಮ ನೀಡಬೇಕು ಎಂದು ಎನ್ನಲಾಗಿದೆ.

ಇದರ ಜೊತೆಗೆ, ಭವಿಷ್ಯನಿಧಿ (ಪಿಎಫ್) ಮತ್ತು ಗ್ರ್ಯಾಚುಟಿಗಳಲ್ಲಿ ಗಮನಾರ್ಹ ಬದಲಾವಣೆಯಾಗಬಹುದು ಎನ್ನಲಾಗಿದೆ. ಹೊಸ ನಿಯಮಗಳ ಪ್ರಕಾರ, ಭತ್ಯೆಗಳು ಒಟ್ಟು ವೇತನದ ಶೇಕಡಾ 50 ರಷ್ಟಾಗುತ್ತದೆ. ಇದು ನೌಕರರ ವೇತನ ರಚನೆಯಲ್ಲಿ ಕಡ್ಡಾಯ ಬದಲಾವಣೆಗಳಿಗೆ ಕಾರಣವಾಗುತ್ತದೆ. ಮೂಲ ವೇತನವು ಒಟ್ಟು ವೇತನಕ್ಕಿಂತ ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚಿನದಾಗಿರುತ್ತದೆ.
ಹೊಸ ನಿಯಮಗಳು ವಿಶೇಷವಾಗಿ ಹೆಚ್ಚಿನ ಸಂಬಳ ಪಡೆಯುವ ನೌಕರರ ವೇತನ ರಚನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪಿಎಫ್ ಮತ್ತು ಗ್ರ್ಯಾಚುಟಿ ಹೆಚ್ಚಿಸುವುದರಿಂದ ಕಂಪೆನಿಗಳ ವೆಚ್ಚವೂ ಹೆಚ್ಚಾಗುತ್ತದೆ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ