Breaking News

ಇಂದು ಮತ್ತೆ ಅಡುಗೆ ಅನಿಲ ದರದಲ್ಲಿ 25 ರೂ. ಏರಿಕೆ..!

Spread the love

ಬೆಂಗಳೂರು,ಮಾ.1-ಕಳೆದ ಎರಡು ತಿಂಗಳಿನಿಂದ ಸತತವಾಗಿ ಆರು ಬಾರಿ ಅಡುಗೆ ಅನಿಲ ದರ ಏರಿಕೆಯಾಗಿದೆ. ಇಂದು ಮತ್ತೆ 25 ರೂ. ದರ ಹೆಚ್ಚಳವಾಗಿದ್ದು ಇದರಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ. ಇಂದು ಬೆಳಗ್ಗೆ ದರ ಏರಿಕೆ ಬಳಿಕ 14.2 ಕೆಜಿ ಸಿಲಿಂಡರ್‍ನ ದರ 822 ರೂ.ಆಗಿದೆ. ಎಲ್‍ಪಿಜಿ ದರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಪೆಟ್ರೋಲ್ ಡೀಸೆಲ್ ದರದ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಗ್ಯಾಸ್ ಸಿಲಿಂಡರ್‍ನ ಬೆಲೆ ಏರಿಕೆ ತೀವ್ರ ಆಘಾತ ಮೂಡಿಸಿದೆ.

ಅಡುಗೆ ಅನಿಲದ ದರ ಏರಿಕೆ ದಾಖಲೆ ನಿರ್ಮಿಸಿದೆ. ಕಳೆದ ಮೂರು ತಿಂಗಳಲ್ಲಿ ಒಟ್ಟು 225 ರೂ.ಗಳಷ್ಟು ದರ ಹೆಚ್ಚಾಗಿದೆ. ಕಳೆದ ವರ್ಷದ ನವೆಂಬರ್ 30ರಂದು ಏರಿಕೆಯಾಗಿದ್ದ ಸಿಲಿಂಡರ್‍ನ ದರ ಮತ್ತೆ ಡಿಸೆಂಬರ್ 1ಕ್ಕೆ ಪರಿಷ್ಕರಣೆಯಾಗಿತ್ತು. ಜನವರಿ 1, ಫೆಬ್ರವರಿ 4, ಫೆಬ್ರವರಿ 15 ಹಾಗೂ 25ರಂದು ತಲಾ 25 ರೂ.ಗಳಂತೆ ದರ ಹೆಚ್ಚಾಗಿದೆ. ಕಳೆದ ಮೂರು ದಿನಗಳ ಹಿಂದೆ 797 ರೂ. ಇದ್ದ ದರ ಇಂದು 822 ರೂ.ಗಳಾಗಿದೆ.ನಿರಂತರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದರ ಬೆನ್ನಲ್ಲೇ ದಿನನಿತ್ಯದ ಅಗತ್ಯದ ವಸ್ತುಗಳ ಬೆಲೆಯೂ ಗಗನಮುಖಿಯಾಗುತ್ತಲೇ ಇದೆ. ಸರಕು ಸಾಗಾಣಿಕೆ ವೆಚ್ಚ ಸೇರಿದಂತೆ ನಾನಾ ರೀತಿಯ ಖರ್ಚುಗಳು ದುಬಾರಿಯಾಗ ತೊಡಗಿವೆ. ಇನ್ನು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲೂ 96 ರೂ. ಹೆಚ್ಚಳವಾಗಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ