Breaking News

ಇಂದು ಸಂಜೆ 6 ಗಂಟೆಗೆ ಬಿಗ್​ ಬಾಸ್ 8 ಪ್ರಾರಂಭ​!; ಮನೆ ಒಳಗೆ ಹೋಗುವವರು ಇವ್ರೇನಾ?

Spread the love

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫೆಬ್ರವರಿಯಿಂದ ಆರಂಭವಾಗಲಿದೆ ಎನ್ನುವ ಸುದ್ದಿ ಹೊರ ಬಿದ್ದಿದ್ದೇ ತಡ, ಪ್ರೇಕ್ಷಕರು ಮನೆ ಒಳಗೆ ಯಾರು ಹೋಗಲಿದ್ದಾರೆ? ಈ ಬಾರಿ ಮನೆ ಸೇರುವ ಸ್ಪರ್ಧಿಗಳೆಷ್ಟು? ಸುದೀಪ್​ ಯಾವ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದರು. ಈ ಎಲ್ಲಾ ಪ್ರಶ್ನೆ ಹಾಗೂ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಸಂಜೆ 6 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಸೀಸನ್​ 8 ಗ್ರ್ಯಾಂಡ್​ ಆಗಿ ಪ್ರಾರಂಭಗೊಳ್ಳಲಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ನಟ ಸುದೀಪ್​ ಬಿಗ್​ ಬಾಸ್​ ನಡೆಸಿಕೊಡಲಿದ್ದಾರೆ. ಪ್ರತಿ ಅಭ್ಯರ್ಥಿಯನ್ನು ವೇದಿಕೆಯ ಮೇಲೆ ಕರೆದು ಅವರ ಪರಿಚಯ ನೀಡಿ, ಮನೆ ಒಳಗೆ​ ಕಳುಹಿಸುವ ಕೆಲಸವನ್ನು ಸುದೀಪ್​ ಮಾಡಲಿದ್ದಾರೆ. ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಬಿಗ್​ ಬಾಸ್​ ಕಾರ್ಯಕ್ರಮ ನಡೆಯಲಿದೆ. ಕಂಟೆಸ್ಟೆಂಟ್​ಗಳು ವೇದಿಕೆ ಏರುವುದರ ಜತೆಗೆ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇರುವ ಸಾಧ್ಯತೆ ಇದೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆಯಪ್​ಗೆ ಭೇಟಿ ನೀಡಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿ, ಅಲ್ಲಿ ಬಿಗ್​ ಬಾಸ್ ವೀಕ್ಷಣೆ ಮಾಡಬಹುದು.

ಬಿಗ್​ ಬಾಸ್​ ಸಂಭಾವ್ಯರ ಪಟ್ಟಿ

ಪ್ರತಿಬಾರಿಯೂ ಬಿಗ್​ಬಾಸ್​ ಶುರುವಾಗುತ್ತದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಸ್ಪರ್ಧಿಗಳು ಯಾರು ಎಂಬ ಕುತೂಹಲ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಇನ್ನು ಬಿಗ್​ಬಾಸ್​ಗೆ ಹೋಗುವವರು ಯಾರೂ ಆ ಬಗ್ಗೆ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳುವಂತಿಲ್ಲ. ಹೀಗಾಗಿ ಬಹುತೇಕರು ಹೋಗುವುದು ನಿಕ್ಕಿಯಾಗಿದ್ದರೂ ಕೇಳಿದರೆ ಇಲ್ಲಪ್ಪಾ, ನಾನು ಹೋಗ್ತಿಲ್ಲ ಎಂದು ನಿರಾಕರಿಸುತ್ತಾರೆ. ಹಾಗಾದರೆ, ಈ ಬಾರಿ ಬಿಗ್​ ಬಾಸ್​ ಮನೆಗೆ ತೆರಳಲಿರುವವರು ಯಾರು ಎನ್ನುವ ಸಂಭಾವ್ಯ ಪಟ್ಟಿ ಇಲ್ಲಿದೆ.

-ಆಶಿಕಾ ರಂಗನಾಥ್ ಸಹೋದರಿ ಅನುಶಾ ರಂಗನಾಥ್
-ಕಾಮಿಡಿ ಕಿಲಾಡಿ ನಯನಾ
-ನಿರ್ದೇಶಕ ರವಿ ಶ್ರೀವತ್ಸ
-ಬ್ರಹ್ಮಗಂಟು ಖ್ಯಾತಿಯ ಗುಂಡಮ್ಮ
-ರಘು ವೈನ್ ಸ್ಟೋರ್​ನ ರಘು ಗೌಡ
-ಕಿರಣ್ ಶ್ರೀನಿವಾಸ್
-ಸುನಿಲ್ ರಾವ್
-‘ಲವ್ ಗುರು’ ರಾಜೇಶ್
-ಕಿರುತೆರೆ ನಟಿ ಸಮೀಕ್ಷಾ
-ಅಗ್ನಿಸಾಕ್ಷಿಯ ಸುಕೃತಾ
-ಅಮೃತವರ್ಷಿಣಿಯ ರಜಿನಿ
-ತಬಲಾ ನಾಣಿ
-ತರಂಗ ವಿಶ್ವ
-ಸರಿಗಮಪ.. ಹನುಮಂತ
-ನಿರೂಪಕ ಅಮರ್ ಪ್ರಸಾದ್


Spread the love

About Laxminews 24x7

Check Also

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ.

Spread the love ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ. ಬೆಂಗಳೂರು : …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ