Breaking News

ಟಿಕೇಟ್ ಅಸಲಿ ಆಟ ಇನ್ನು ಶುರು ಇಂದಿನಿಂದಲೇ ನೀತಿ ಸಂಹಿತೆ ಜಾರಿ!

Spread the love

ನವದೆಹಲಿ.

ಕೇಂದ್ರ ಸಚಿವ ಸುರೇಶ ಅಂಗಡಿ ಅವರ ನಿಧನದ ನಂತರ ತೆರವಾದ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯ  ದಿನಾಂಕ ಇಂದು ಘೋಷಣೆಯಾಗುವ ಸಾಧ್ಯತೆ ಇದೆ.

ಕೇಂದ್ರ ಚುನಾವಣೆ ಆಯೋಗ ಈ ಸಂಬಂಧ ಬುಧವಾರ ಬೆಳಿಗ್ಗೆ  11 ಕ್ಕೆ ಪತ್ರಿಕಾಗೋಷ್ಠಿ ಕರೆದಿದೆ.

ಆಸ್ಸಾಂ, ಪಶ್ಚಿಮ ಬಂಗಾಳ, ಪುದುಚೆರಿ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ.‌

ಇವುಗಳ ಜೊತೆಗೆ ಬೆಳಗಾವಿ ಉಪ ಚುನಾವಣೆ ಕೂಡ ನಡೆಯಬಹುದು. ಅದಕ್ಕೆ ತಕ್ಣದಿಂದಲೇ ನೀತಿ ಸಂಹಿತೆ ಜಾರಿ ಆದರೂ ಅಚ್ಚರಿ ಪಡಬೇಕಿಲ್ಲ.

ಬೆಳಗಾವಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಅಂಗಡಿ ಉತ್ತರಾಧಿಕಾರಿ ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಬೆಳಗಾವಿ ಬಿಜೆಪಿಯಲ್ಲಿ ಹಲವರ ಹೆಸರು ಪ್ರಮಖವಾಗಿ ಕೇಳಿ ಬರುತ್ತಿವೆ. ಹಾಗೆ ನಾನೇ ಅಭ್ಯರ್ಥಿ ಎಂದು ತಯಾರಾಗಿ ನಿಂತವರ ಪಟ್ಟಿ ಶತಕ ದಾಟುತ್ತದೆ.

ಡಾ.ಪ್ರಭಾಕರ ಕೋರೆ, ಡಾ.. ಗಿರೀಶ ಸೋನವಾಲ್ಕರ, ಎಂಎಲ್ಸಿ ಮಹಾಂತೇಶ ಕವಟಗಿಮಠ, ಡಾ. ರವಿ ಪಾಟೀಲ, ಡಾ. ವಿಶ್ವನಾಥ ಪಾಟೀಲ,  ಸಂ ಪರವಾರದ  ಕೃಷ್ಣ ಭಟ್, ಜಿಲ್ಲಾ ಪಂಚಾಯತ ಸದಸ್ಯ ರಮೇಶ ದೇಶಪಾಂಡೆ ಅವರ ಹೆಸರು ಚಾಲ್ತಿಯಲ್ಲಿದೆ.

ಮಹಿಳೆಯ ಪಟ್ಟಿ‌‌ಗಮನಿಸಿದರೆ ಉಜ್ಬಲಾ ಬಡವನ್ನಾಚೆ, ಭಾರತಿ ಮಗದುಮ್ ಮತ್ತಿತರ ಹೆಸರು ಕೇಳಿ ಬರುತ್ತದೆ.

ಬಿಜೆಪಿ ನಾಯಕರ ಪ್ರಕಾರ, ಟಿಕೇಟಗಾಗಿ ಇಲ್ಲಿಯವರೆಗೆ ನಡೆದಿದ್ದು ಟ್ರಯಲ್. ಇನ್ನು ಮುಂದೆ ಅಸಲಿ ಆಟ ಶುರು ಆಗಬಹುದು ಅಂತೆ.

ಇದೆಲ್ಲದರ ಮಧ್ಯೆ ರವಿ ಪಾಟೀಲರು ಈ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರು ಎನ್ನುವ ಅಪವಾದವಿದೆ. ಹೀಗಾಗಿ ಅವರ ಬಗ್ಗೆ ಹೆಚ್ಚಿನ ಒಲವು ಹೊಂದಿಲ್ಲ ಎಂದು ಹೇಳಲಾಗಿದೆ. ಮೇಲಾಗಿ ಸ್ಥಳಿಯ ಶಾಸಕರು ಅವರ ಬಗ್ಗೆ ಅಷ್ಟೊಂದು ಸರಿ ಅಭಿಪ್ರಾಯ ವನ್ನು ವ್ಯಕ್ತಪಡಿಸಿಲ್ಲ ಎಂದು ಹೇಳಲಾಗಿದೆ.

ಇನ್ನು ಕಾಂಗ್ರೆಸ್ ನಲ್ಲಿ ಇದ್ದ ನಾಲ್ಕೈದು ಜನರಲ್ಲಿ ಯಾರು ಎನ್ನುವ ಪ್ರಶ್ನೆ ಎದುರಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ನಲ್ಲಿ ತಮ್ಮ ಅಭ್ಯರ್ಥಿ ಯನ್ನು ಗೆಲ್ಲಿಸಬೇಕು ಎನ್ನುವುದಕ್ಕಿಂತ ಅವರಿಗೂ ಸೋಲಿನ ರುಚಿ ತೋರಿಸಬೇಕು ಎನ್ನುವ‌ ಲೆಕ್ಕಾಚಾರದ ಮಾತುಗಳು ಕೇಳಿ ಬರುತ್ತಿವೆ


Spread the love

About Laxminews 24x7

Check Also

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ

Spread the love ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚಿಕ್ಕೋಡಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ