Breaking News

ಶಾರದಾ ಚಿಟ್ ಫಂಡ್ ಹಗರಣ: ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ವಿಚಾರಣೆ 2 ವಾರ ಮುಂದೂಡಿದ ಸುಪ್ರೀಂ ಕೋರ್ಟ್

Spread the love

ದೆಹಲಿ: ಇಡೀ ದೇಶದ ಗಮನವನ್ನು ಸೆಳೆದಿದ್ದ ಶಾರದಾ ಚಿಟ್ ಫಂಡ್ ಹಗರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೋಲ್ಕತ್ತಾ ಪೋಲಿಸ್ ಆಯುಕ್ತ ರಾಜೀವ್ ಕುಮಾರ್ ಮತ್ತು ಇತರೆ ಆರೋಪಿಗಳ ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಿದೆ. ಸಿಬಿಐ ಸಲ್ಲಿಸಿದ್ದ ಮನವಿ ಆಧರಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸರ್ವೋಚ್ಛ ನ್ಯಾಯಾಲಯ ಈ ಹಗರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ. ಅತಿ ಹೆಚ್ಚು ಬಡ್ಡಿ ದರ ನೀಡುವ ಆಮಿಷವೊಡ್ಡಿ ನಡೆಯುತ್ತಿದ್ದ ಹಗರಣ 2013 ರಲ್ಲಿ ಬೆಳಕಿಗೆ ಬಂದಿತ್ತು. ಅದುವರೆಗೆ 17 ಲಕ್ಷ ಜನರಿಂದ ಠೇವಣಿ ಸಂಗ್ರಹಿಸಿದ್ದ ಶಾರದಾ ಚಿಟ್ ಫಂಡ್ ಸಂಸ್ಥೆಯು 200 ರಿಂದ 300 ಕೋಟಿ ರೂ. ಹಣ ಸಂಗ್ರಹಿಸಿತ್ತು ಎಂದು ಅಂದಾಜಿಸಲಾಗಿತ್ತು. ಶಾರದಾ ಗ್ರೂಪ್, ನಾಲ್ಕು ವರ್ಷಗಳಲ್ಲಿ ತನ್ನ ಮೂಲ ನೆಲೆ ಪಶ್ಚಿಮ ಬಂಗಾಳ ಸೇರಿ ಜಾರ್ಖಂಡ್, ಒರಿಸ್ಸಾ, ಈಶಾನ್ಯ ರಾಜ್ಯಗಳಲ್ಲಿ 300 ಕಚೇರಿಗಳನ್ನು ತೆರೆದಿತ್ತು.

ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣದ ತನಿಖೆಗೆ ಪ್ರತ್ಯೇಕ ತನಿಖಾ ಆಯೋಗವನ್ನು ರಚಿಸಿತ್ತು. ಜತೆಗೆ, ಕಡಿಮೆ ಆದಾಯ ಹೂಡಿಕೆದಾರರಿಗೆ ಹಣವನ್ನು ಮರಳಿಸಲು 500 ಕೋಟಿ ಮೊತ್ತದ ನಿಧಿಯನ್ನು ಸ್ಥಾಪಿಸಿತ್ತು. ತನಿಖೆಯಲ್ಲಿ ಉದ್ಯಮಿಗಳು, ಪ್ರಭಾವಶಾಲಿಗಳು ಸೇರಿ ಹಲವರ ಹೆಸರು ಸಿಲುಕಿಕೊಂಡಿತ್ತು. ಜತೆಗೆ ಕೇಂದ್ರ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಪ್ರತ್ಯೇಕ ತನಿಖೆ ಕೈಗೊಂಡಿದ್ದವು. 2014ರಲ್ಲಿ ಈ ಹಗರಣ ಪ್ರಕರಣದ ಗಂಭೀರತೆ ಮತ್ತು ಅಕ್ರಮ ನಡೆದಿರುವುದನ್ನು ಅರಿತ ಸುಪ್ರೀಂ ಕೋರ್ಟ್ ಸಿಬಿಐಗೆ ಪ್ರಕರಣ ಕೈಗೊಳ್ಳಲು ನಿರ್ದೇಶನ ನೀಡಿತ್ತು.

ಪ್ರಕರಣ ನಾಟಕೀಯ ತಿರುವು ಪಡೆದಿದ್ದೇ ಇವರಿಂದ..

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ಕಡತಗಳು ನಾಪತ್ತೆಯಾದ ಕುರಿತು ಪ್ರಶ್ನಿಸಲು ಪೊಲೀಸ್ ಆಯುಕ್ತ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಅವರ ಮನೆಗೆ ಸಿಬಿಐ ತಂಡ ಆಗಮಿಸಿತ್ತು. ಆದರೆ ಸಿಬಿಐ ತಂಡವನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು. ಆನಂತರ ಸಿಬಿಐ ತಂಡವನ್ನು ಬಿಡುಗಡೆ ಮಾಡಿದ್ದರು. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಮತಾ ಬ್ಯಾನರ್ಜಿ ಆಪಾದಿಸಿ ಧರಣಿಯನ್ನು ಸಹ ನಡೆಸಿದ್ದರು. ಇದೀಗ ಸಿಬಿಐ ಮನವಿಯ ವಿಚಾರಣೆಯನ್ನು ಎರಡು ವಾರಗಳ ನಂತರ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

ಐಪಿಎಸ್​ ರಾಜೀವ್ ಕುಮಾರ್ ಅವರು ವಿಪಕ್ಷಗಳ ನಾಯಕರ ಮೇಲೆ ನಿಗಾ ಇರಿಸುತ್ತಾರೆ ಎಂದು ಅಮಿತ್ ಶಾ ಆರೋಪಿಸಿ ಅವರನ್ನು 2016ರ ವಿಧಾನಸಭಾ ಚುನಾವಣೆಯಿಂದ ದೂರವಿರಿಸುವಂತೆ ಮನವಿ ಮಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ಹಿಂದೆ ಎಡಪಕ್ಷಗಳು ಅಧಿಕಾರದಲ್ಲಿದ್ದಾಗ ಮಮತಾ ಬ್ಯಾನರ್ಜಿ ಸಹ ಇದೇ ತೆರನಾದ ಆರೋಪ ಹೋರಿಸಿದ್ದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ