Breaking News

ಪಂಚಾಕ್ಷರಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಉದ್ಘಾಟಿಸಿದ ಮಹಾಂತೇಶ ಕವಟಗಿಮಠ

Spread the love

ಚಿಕ್ಕೋಡಿ: ಬಡ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸುವ ಮುಖಾಂತರ ಸಾಮಾನ್ಯ ಜನರ ಆರ್ಥಿಕ ಪ್ರಗತಿಗೆ ಸಹಕಾರಿ ಸಂಸ್ಥೆಗಳು ನೆರವಾಗಬೇಕು ಎಂದು ವಿಧಾನ ಪರಿಷತ್‍ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ತಾಲೂಕಿನ ಮುಗಳಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಿದ ಓಂ ಶ್ರೀ ಪಂಚಾಕ್ಷರಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಸಂಸ್ಥೆಗಳಲ್ಲಿ ಠೇವಣಿದಾರರಿಗೂ ಕಡಿಮೆ ಬಡ್ಡಿ ನೀಡುವ ಜತೆಗೆ ಸಾಲಗಾರರಿಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವ ವ್ಯವಸ್ಥೆಯಾಗಬೇಕೆ ಹೊರತು ಸಾಲ ಪಡೆದ ಸಾಲಗಾರ ಆರ್ಥಿಕ ದಿವಾಳಿ ಎದ್ದು ತನ್ನ ಆಸ್ತಿ ಮಾರಿ ಸಾಲ ತೀರಿಸುವಂತಾಗಬಾರದು ಹೇಳಿದರು.

ಸಾರ್ವಜನಿಕರು ತಾವು ಗಳಿಸುವ ಹಣದಲ್ಲಿ ಅಲ್ಪ ಉಳಿತಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದು ನಾವು ಉಳಿಸುವ ಹಣ ನಾಳೆ ನಮಗೆ ದೊಡ್ಡ ಪ್ರಮಾಣದಲ್ಲಿ ಬದುಕಿಗೆ ಆಶ್ರಯವಾಗಬಹುದು ಎಂದು ಹೇಳಿದರು.

ನಿಡಸೋಶಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರು ಸರ್ಕಾರದ ಯೋಜನೆಗಳ ಲಾಭ ಪಡೆದುಕೊಂಡು ಹೈನುಗಾರಿಕೆಯಲ್ಲಿಯೇ ಹೊಸ ಹೊಸ ಉದ್ಯಮ ಆರಂಭಿಸುವ ಮುಖಾಂತರ ಇನ್ನಷ್ಟು ಆರ್ಥಿಕ ಸಬಲತೆ ಸಾಧಿಸಲು ಮುಂದಾಗಬೇಕು ಎಂದು ಹೇಳಿದರು.

ಮಾಜಿ ಜಿ.ಪಂ.ಸದಸ್ಯ ಮಹೇಶ ಭಾತೆ, ತಾ.ಪಂ.ಸದಸ್ಯ ರಾಜು ಪಾಟೀಲ, ಬಸು ಮಾಳಗೆ, ಚಂದ್ರಶೇಖರ ಅರಭಾಂವಿ, ಸಹಕಾರಿ ಅಧ್ಯಕ್ಷ ಪಂಚಾಕ್ಷರಿ ಗೋಟೂರಮಠ, ಮಲ್ಲಪ್ಪ ಅಗಸರ, ಮಹಾದೇವ ಕಳಸನ್ನವರ, ಸಂಜಯಗೌಡ ಪಾಟೀಲ, ಎಸ್.ಬಿ.ಮಠದ, ವಿ.ಪಿ.ಗೋಟೂರೆ ಮುಂತಾದವರು ಉಪಸ್ಥಿತರಿದ್ದರು.

 

 

 


Spread the love

About Laxminews 24x7

Check Also

ಶ್ರೀರಾಮುಲುಗೂ ವಿಜಯೇಂದ್ರ ಮುಂದುವರಿಯುವುದು ಬೇಕಿಲ್ಲ, ಅದನ್ನು ಚಾಣಾಕ್ಷತೆಯಿಂದ ಹೇಳುತ್ತಾರೆ!

Spread the loveಕೋಲಾರ: ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರಿಗೂ ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದು ಬೇಕಿಲ್ಲ, ಅದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ