ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ.
ಪ್ರಕರಣದ ಆಲಿಕೆಗೆ ಅಮಿತ್ ಶಾ ಖುದ್ದಾಗಿ ಅಥವಾ ವಕೀಲರ ಮೂಲಕ ಫೆಬ್ರವರಿ 22ರಂದು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಇಲ್ಲಿನ ಬಿಧಾನನಗರದ ಸಂಸದ/ಶಾಸಕರ ಕೋರ್ಟ್‌ನ ವಿಶೇಷ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆಯ 500ನೇ ವಿಧಿ ಅಡಿ ಮಾನಹಾನಿ ಪ್ರಕರಣ ದಾಖಲಿಸಲಾಗಿದ್ದು, ಅಮಿತ್ ಶಾ ಅವರು ಖದ್ದು ಹಾಜರಿರಬೇಕಾದ ಅಗತ್ಯವಿದೆ.
ಕೋಲ್ಕತ್ತಾದ ಮೇಯೋ ರಸ್ತೆಯಲ್ಲಿ ಆಗಸ್ಟ್ 11, 2018ರಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ರ‍್ಯಾಲಿಯ ವೇಳೆ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳನ್ನು ಅಮಿತ್ ಶಾ ನೀಡಿದ್ದರು ಎಂದು ವಕೀಲ ಸಂಜಯ್ ಬಸು ಪತ್ರಿಕಾ ಪ್ರಕಟಣೆ ವೇಳೆ ತಿಳಿಸಿದ್ದಾರೆ.
Laxmi News 24×7