ನವದೆಹಲಿ: ಗೂಗಲ್ ಫೆ.24ರಿಂದ ಪ್ಲೇ ಮ್ಯೂಸಿಕ್ ಸೇವೆಯನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿದ್ದು, ಇದಕ್ಕೆ ಮೊದಲು ಎಲ್ಲಾ ರೀತಿಯ ಡೆಟಾ ಉಳಿಸಿಕೊಳ್ಳಲು ಗ್ರಾಹಕರಿಗೆ ಸೂಚಿಸಿದೆ.
ನಾವು ಆದಷ್ಟು ಬೇಗನೆ ಗೂಗಲ್ ಪ್ಲೇ ಮ್ಯೂಸಿಕ್ ನ ಲೈಬ್ರೇರಿ ಮತ್ತು ಡೆಟಾ ಡಿಲೀಟ್ ಮಾಡುತ್ತಿದ್ದೇವೆ. ಫೆ.24ರಂದು ಪ್ಲೇ ಮ್ಯೂಸಿಕ್ ನ ಕೊನೆಯ ದಿನವಾಗಿದೆ. ಮ್ಯೂಸಿಕ್ ಲೈಬ್ರೇರಿ, ಅಪ್ ಲೋಡ್, ಇತ್ಯಾದಿಗಳು ಕೂಡ ಡಿಲೀಟ್ ಆಗಲಿದೆ. ಇದರ ಬಳಿಕ ಇದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ಆದರೆ ಈಗಾಗಲೇ ಗೂಗಲ್ ಪ್ಲೇ ಮ್ಯೂಸಿಕ್ ಖಾತೆ ಇರುವವರು ಅದನ್ನು ಯೂ ಟೂಬ್ ಮ್ಯೂಸಿಕ್ ಗೆ ವರ್ಗಾಯಿಸಬಹುದು. ಗೂಗಲ್ ಪ್ಲೇ ಮ್ಯೂಸಿಕ್ ನ ಲೈಬ್ರೇರಿ ಮತ್ತು ಡೆಟಾ ಮರಳಿ ಪಡೆಯಲು ಬಯಸಿದ್ದರೆ ಆಗ ಗೂಗಲ್ ಟೇಕ್ ಔಟ್ ಮೂಲಕ ಫೆ.24ರ ಮೊದಲು ಇದನ್ನು ಪಡೆಯಬೇಕು ಎಂದು ಗೂಗಲ್ ತಿಳಿಸಿದೆ.
ಗೂಗಲ್ ತನ್ನ ಗೂಗಲ್ ಪ್ಲೇ ಮ್ಯೂಸಿಕ್ ಬದಲಿಗೆ ಯೂ ಟೂಬ್ ಮ್ಯೂಸಿಕ್ ನ್ನು ಆರಂಭಿಸಿದೆ.
Laxmi News 24×7