ನವ ದೆಹಲಿ : ಇಂದು ಮರಾಠ ಸಾಮ್ರಾಟ ಛತ್ರಪತಿ ಶಿವಾಜಿಯವರ 391ನೇ ಜಯಂತೋತ್ಸವ. ಭಾರತ ದೇಶ ಕಂಡ ವೀರಾಧಿವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕೂಡ ಒಬ್ಬರು. ಜೀಜಾಬಾಯಿ ಅವರ ಪ್ರೇರಣಾತ್ಮಕ ಮಾತುಗಳಿಂದಲೇ ಶಿವಾಜಿ ಬಾಲ್ಯದಲ್ಲೇ ಮರಾಠ ಸಾಮ್ರಾಜ್ಯದ ಕನಸನ್ನು ಕಂಡವರು.
ಶಿವಾಜಿ, ಮರಾಠ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಸಾಮ್ರಾಜ್ಯ ಕಟ್ಟಿದರು ಎಂದು ಕೆಲ ಇತಿಹಾಸಕಾರರು ಹೇಳುತ್ತಾರೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಿವಾಜಿಯವರ ಸಾಹಸಗಾಥೆ ಒಂದು ಪ್ರೇರಣೆ ಎನ್ನುವ ದೃಷ್ಟಿಯಲ್ಲಿ ಭಾರತದ ಸಹಸ್ರ ಸಹಸ್ರ ಮಂದಿ ಶಿವಾಜಿಯನ್ನು ಅನುಸರಿಸುವವರಿದ್ದಾರೆ.
ಇಡೀ ದೇಶದಾದ್ಯಂತ ಇಂದು ಶಿವಾಜಿ ಮಹಾರಾಜ್ ಅವರ 391ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ಇನ್ನು, ಮಹಾರಾಷ್ಟ್ರ ಸರ್ಕಾರ ಈ ದಿನವನ್ನು ಶಿವಾಜಿಯವರಿಗೆ ಸಲ್ಲಿಸುವ ಗೌರವಾರ್ಥವಾಗಿ ಸರ್ಕಾರಿ ರಜಾ ದಿನವೆಂದು ಘೋಷಿಸಿದೆ.
ಈ ಶುಭ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನೊಳಗೊಂಡು ಹಲವು ಪ್ರಮುಖ ನಾಯಕರು ಶುಭ ಹಾರೈಸಿದ್ದಾರೆ.
ದೇಶದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ಶಿವಾಜಿ ಜಯಂತಿಯ ಶುಭಾಶಯವನ್ನು ತಮ್ಮ ಟ್ವೀಟರ್ ಮೂಲಕ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹೀಗೆ ಬರೆದುಕೊಂಡಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಭಾರತೀಯರಿಗೆ ಶಿವಾಜಿ ಜಯಂತಿಯ ಶುಭಾಶಯ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಶುಭಾಶಯ ತಿಳಿಸಿದ್ದಾರೆ.
ನಿತಿನ್ ಗಡ್ಕರಿ ಹೀಗೆ ಶುಭಾಶಯ ತಿಳಿಸಿದ್ದಾರೆ.
ಇನ್ನು, ದೇಶದ ಪ್ರಮುಖ ರಾಜಕೀಯ ನಾಯಕರು, ಕ್ರಿಕೆಟಿಗರು ಈ ಶುಭ ಸಂದರ್ಭದಲ್ಲಿ ಶುಭಾಶಯ ತಿಳಿಸಿದ್ದಾರೆ.
“ಪ್ರಭಾವಿಶಾಲಿಗಖು ಪ್ರಭಾವಿಶಾಲಿ ಸ್ಥಳದಿಂದ ಬಂದವರು ಎಂದು ಇತಿಹಾಸ ತಿಳಿಸುತ್ತದೆ. ಆದರೇ, ಅದು ಸರಿಯಲ್ಲ. ಪ್ರಭಾವಿಶಾಲಿಗಳು ತಮ್ಮ ಸ್ಥಳವನ್ನು ಪ್ರಭಾವಿಶಾಲಿಯನ್ನಾಗಿ ಮಾಡುತ್ತಾರೆ. ಛತ್ರಪತಿ ಶಿವಾಜಿಯವರಿಗೆ ಪ್ರಣಾಮಗಳು. ಜೈ ಮಾ ಭವಾನಿ” ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬರೆದುಕೊಂಡಿದ್ದಾರೆ.
ಶಿವಾಜಿ ಮಹಾರಾಜ್ ಅವರಿಗೆ ಗೌರಾವರ್ಪಣೆ. ಅವರ ಧೈರ್ಯ ಮತ್ತು ತ್ಯಾಗ ಮುಂದಿನ ತಲೆಮಾರಿಗೆ ಪ್ರಭಾವಬೀರಲಿ ಎಂದು ಕ್ರಿಕೆಟಿಗ ಅಜಿಂಕ್ಯಾ ರಹಾನೆ ಟ್ವೀಟ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.
Laxmi News 24×7