Breaking News

ವರ್ಷಾಂತ್ಯಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಕೋವಿಡ್-19 ಲಸಿಕೆ ಲಭ್ಯ

Spread the love

ಕೋವಿಡ್-19 ಲಸಿಕೆ ಕಾರ್ಯಕ್ರಮ ಮೊದಲ ಹಂತ ಚಾಲ್ತಿಯಲ್ಲಿರುವಂತೆಯೇ ದೇಶಾದ್ಯಂತ ಈ ಲಸಿಕೆಯು ವ್ಯಾಪಕವಾಗಿ ಯಾವಾಗ ಲಭ್ಯವಾಗಲಿದೆ ಎಂಬ ಪ್ರಶ್ನೆಗಳು ಉದ್ಭವವಾಗತೊಡಗಿವೆ.

ವರ್ಷಾಂತ್ಯ ಅಥವಾ ಅದಕ್ಕೂ ಮುನ್ನವೆ ಈ ಲಸಿಕೆಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ ಎಂದು ಏಮ್ಸಕ್‌ ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.

ಬುಧವಾರ ಕೋವಿಡ್‌-19ನ ಎರಡನೇ ಡೋಸ್ ಹಾಕಿಸಿಕೊಂಡ ಗುಲೇರಿಯಾ, “ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 50 ವರ್ಷ ದಾಟಿದ ಅಶಕ್ತ ಜನರಿಗೆ ಲಸಿಕೆ ಹಾಕುವ ಗುರಿ ತಲುಪಿದ ಬಳಿಕ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಾಗಲಿದೆ” ಎಂದು ಹೇಳಿದ್ದಾರೆ.

ದೇಶದ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಸಂಬಂಧ ಯಾವುದೇ ಸಾವುಗಳು ಕಂಡು ಬರದೇ ಇರುವ ವೇಳೆ ಏಮ್ಸ್‌ ನಿರ್ದೇಶಕರ ಈ ಹೇಳಿಕೆ ಬಂದಿದೆ.

ಬುಧವಾರ ಬೆಳಿಗ್ಗೆ ವೇಳೆಗೆ, 1,91,373 ಸೆಶನ್‌ಗಳಲ್ಲಿ 90 ಲಕ್ಷದಷ್ಟು ಲಸಿಕೆಗಳನ್ನು ಫಲಾನುಭವಿಗಳಿಗೆ ಕೊಡಲಾಗಿದೆ.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ