ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸ ಕಾವೇರಿ ಮುಂಭಾಗ ದೇಶದ ಅತಿ ದೊಡ್ಡ ಮೇಕ್ ಇನ್ ಇಂಡಿಯಾ ಲಾಂಚನ ನಿರ್ಮಾಣ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ.
ಸುಮಾರು 50 ಲಕ್ಷ ವೆಚ್ಚದಲ್ಲಿ ಈ ಲಾಂಛನ ನಿರ್ಮಾಣವಾಗಲಿದ್ದು, ಲಾಂಛನ ಇಡಲು ಲ್ಯಾಂಡ್ ಸ್ಕೇಪ್ ಕೂಡ ಸಿದ್ಧವಾಗಲಿದೆ. ಘಾಜಿಯಾಬಾದ್ ನಲ್ಲಿ ತಯಾರಾಗುವ ಈ ಲಾಂಛನ ಬೆಂಗಳೂರಿಗೆ ಆಗಮಿಸಲಿದೆ.
1460 ಕೆ.ಜಿ ತೂಕದ ಬೃಹತ್ ಲಾಂಛನ ಇದಾಗಿದ್ದು, 23 ಅಡಿ ಉದ್ದ, 10 ಅಡಿ ಎತ್ತರ, ನಾಲ್ಕೂವರೆ ಅಡಿ ಅಗಲವಿದೆ. ನೋಡುಗರ ಆಕರ್ಷಿಸಲು ಲಾಮ್ಛನಕ್ಕೆ ಲೈಟಿಂಗ್ಸ್ ಅಳವಡಿಕೆ, ಲಾಂಛನದ ಮುಂಭಾಗದಲ್ಲಿ ವಾಟರ್ ಸ್ಪ್ರಿಂಕ್ಲಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.
Laxmi News 24×7