Breaking News

ಯುವಕನ ಬರ್ಬರ ಕೊಲೆ!ತಲೆ ಮೇಲೆ ಕಲ್ಲು ಎತ್ತಿ ಹಾಕಿ ಶವ ಗುಂಡಿಗೆ ಹಾಕಿದ್ರು.

Spread the love

ಕಲಬುರಗಿ: ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದಿದ್ದಲ್ಲದೆ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊನೆಗೆ ಶವವನ್ನು ಗುಂಡಿಯೊಂದಕ್ಕೆ ಹಾಕಿ ಹೋಗಿದ್ದಾರೆ. ಕಲಬುರಗಿ ನಗರದ ದುಬೈ ಕಾಲನಿ ನಿವಾಸಿ ವೀರೇಶ್​ ಬೀಮಳ್ಳಿ (28) ಕೊಲೆಯಾದ ಯುವಕ.

ನಗರದ ಸೂಪರ್ ಮಾರ್ಕೆಟ್​​ನ ಬಾಂಡೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೀರೇಶ್​, ನಿನ್ನೆ ಮುಂಜಾನೆ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಆದರೆ ಸಂಜೆ ಮನೆಗೆ ಮರಳಿರಲಿಲ್ಲ. ನಿನ್ನೆ ಮಧ್ಯಾಹ್ನದಿಂದಲೇ ಆತ ನಾಪತ್ತೆಯಾಗಿದ್ದ ಎನ್ನಲಾಗಿದ್ದು, ಚೌಕ್ ಠಾಣಾ ಪೊಲೀಸರಿಗೆ ಹೆತ್ತವರು ಮಾಹಿತಿ ನೀಡಿದ್ದರು. ಆದರೆ ನಿನ್ನೆಯಿಂದ ಕಾಣೆಯಾಗಿದ್ದ ವೀರೇಶ್​, ಇಂದು ಶವವಾಗಿದ್ದು, ಕಲಬುರಗಿಯ ಸಿಂದಗಿ ಗ್ರಾಮದ ಹೊರವಲಯದ ಗುಂಡಿಯೊಂದರಲ್ಲಿ ಮೃತದೇಹ ಪತ್ತೆಯಾಗಿದೆ.

ನಿನ್ನೆ ಮಧ್ಯಾಹ್ನವೇ ಮೂವರು ಅಂಗಡಿಗೆ ಬಂದು ಆತನನ್ನು ಕರೆದೊಯ್ದಿದ್ದರು. ಬಳಿಕ ಆತನಿಗೆ ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ, ನಂತರ ಶವವನ್ನು ಗುಂಡಿಗೆ ಎಸೆದಿದ್ದರು. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಕಲಬುರಗಿ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಅಂಬಾವಿಲಾಸ ಅರಮನೆಯ ಚಿನ್ನದ ಹೊಳಪಿನ ದೀಪಾಲಂಕಾರ ಅದ್ಭುತ

Spread the love ಮೈಸೂರು: ಮೈಸೂರಿನ ಪ್ರಮುಖ ಆಕರ್ಷಣೆ ಅಂಬಾವಿಲಾಸ ಅರಮನೆ. ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಈ ಅಂಬಾವಿಲಾಸ ಅರಮನೆಯ ಚಿನ್ನದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ