ರಾಮದುರ್ಗ: ಜೂಟಾಟ ವೇಳೆ ಪೊಲೀಸರು ದಾಳಿ ನಡೆಸಿದ ವೇಳೆ ಹೆದರಿ ಮಲಪ್ರಭಾ ನದಿಗೆ ಹಾರಿದ ಇಬ್ಬರ ಮೃತದೇಹ ಪತ್ತೆಯಾಗಿವೆ.
ಮಂಜು ಬಂಡಿವಡ್ಡರ್(30), ಸಮೀರ್ ಬಟಕುರ್ಕಿ(22) ಮೃತರು. ಮಲಪ್ರಭಾ ನದಿ ದಡದಲ್ಲಿ ಜೂಜಾಡುತ್ತಿದ್ದ ಯುವಕರ ಗುಂಪಿನ ಮೇಲೆ ರಾಮದುರ್ಗ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಬಂಧನ ಭೀತಿಯಿಂದ ಆರು ಜನರು ಮಲಪ್ರಭಾ ನದಿಗೆ ಹಾರಿದ್ದರು. ಈ ವೇಳೆ ನಾಲ್ವರು ಈಜಿ ದಡ ಸೇರಿದ್ರೆ ಇಬ್ಬರು ಯುವಕರು ನಾಪತ್ತೆಯಾಗಿದ್ದರು.
ಬೆಳಗ್ಗೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸಂಜೆ ವೇಳೆಗೆ ಶವ ಪತ್ತೆಯಾಗಿದ್ದು, ಮೃತದೇಹ ಹೊರತೆಗೆಯಲಾಗಿದೆ.
ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇತ್ತ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7