Home / Uncategorized / ಚಿತ್ರಮಂದಿರದೊಳಗೆ ಹಾಗೂ ಹೊರಗೆ ಅಭಿಮಾನಿಗಳಸಂಭ್ರಮ, ಶಿಳ್ಳೆ, ಕೇಕೆ, ಜೈಕಾರ ಕೇಳದೇ ದೊಡ್ಡ ಗ್ಯಾಪ್‌ ಆಗಿತ್ತು

ಚಿತ್ರಮಂದಿರದೊಳಗೆ ಹಾಗೂ ಹೊರಗೆ ಅಭಿಮಾನಿಗಳಸಂಭ್ರಮ, ಶಿಳ್ಳೆ, ಕೇಕೆ, ಜೈಕಾರ ಕೇಳದೇ ದೊಡ್ಡ ಗ್ಯಾಪ್‌ ಆಗಿತ್ತು

Spread the love

ಚಿತ್ರಮಂದಿರದೊಳಗೆ ಹಾಗೂ ಹೊರಗೆ ಅಭಿಮಾನಿಗಳಸಂಭ್ರಮ, ಶಿಳ್ಳೆ, ಕೇಕೆ, ಜೈಕಾರ ಕೇಳದೇ ದೊಡ್ಡ ಗ್ಯಾಪ್‌ ಆಗಿತ್ತು. ಆದರೆ, ಈಗ ನೀರಸವಾಗಿದ್ದ ಚಿತ್ರಮಂದಿರಗಳು ಮತ್ತೆ ಆಯಕ್ಟೀವ್‌ ಆಗಿವೆ. ಶುಕ್ರವಾರ ಬಿಡುಗಡೆಯಾಗಿರುವ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರ ಅಭಿಮಾನಿಗಳ ಸಂಭ್ರಮ ಮರುಕಳಿಸಲು ಸಾಕ್ಷಿಯಾಯಿತು. ಇದಕ್ಕೆ ಕಾರಣ “ಇನ್ಸ್‌ಪೆಕ್ಟರ್‌ ವಿಕ್ರಂ’ ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಮಾಸ್‌ ಡೈಲಾಗ್‌, ಹೈವೋಲ್ಟೆàಜ್‌ ಫೈಟ್‌, ಕ್ಯೂಟ್‌ ಲವ್‌ಸ್ಟೋರಿ, ಟ್ವಿಸ್ಟ್‌, ಚಾಲೆಂಜಿಂಗ್‌ ಸ್ಟಾರ್‌ ಗ್ರ್ಯಾಂಡ್‌ ಎಂಟ್ರಿ ಜೊತೆಗೆ ಕುತೂಹಲ ಹುಟ್ಟಿಸುತ್ತಾ ಸಾಗುವ ಒಂದು ಕಥೆ… ಒಂದು ಮಾಸ್‌ ಸಿನಿಮಾದಲ್ಲಿ ಇದಕ್ಕಿಂತ ಹೆಚ್ಚಿನದ್ದನ್ನು ಬಯಸುವಂತಿಲ್ಲ.

ಈ ಎಲ್ಲಾ ಅಂಶಗಳೊಂದಿಗೆ ಬಂದ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ಪ್ರೇಕ್ಷಕರನ್ನು ರಂಜಿಸುವಲ್ಲಿ ಹಿಂದೆ ಬೀಳುವುದಿಲ್ಲ. ದೃಶ್ಯದಿಂದ ದೃಶ್ಯಕ್ಕೆ ಮಜ ಕೊಡುತ್ತಾ, ನಡು ನಡುವೆ ಟ್ವಿಸ್ಟ್‌ಗಳೊಂದಿಗೆ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಾ ಸಾಗುವುದು ಈ ಸಿನಿಮಾದ ಹೈಲೈಟ್‌ಗಳಲ್ಲೊಂದು.

ಇದೊಂದು ಪೊಲೀಸ್‌ ಸ್ಟೋರಿ. ಪೊಲೀಸ್‌ ಆಫೀಸರ್‌ ಒಬ್ಬ ಹೇಗೆ ವಿಲನ್‌ ಗಳನ್ನು ಅಟ್ಟಾಡಿಸಿ ಹೊಡೆಯುತ್ತಾನೆ ಮತು ಆ ನಂತರ ಏನೇನು ಬೆಳವಣಿಗೆಗಳಾಗುತ್ತವೆ ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಹಾಗಂತ ಕೇವಲ ಇಲ್ಲಿ ರೌಡಿಸಂ, ಪೊಲೀಸ್‌ ಸ್ಟೋರಿಯಷ್ಟೇ ಇಲ್ಲ. ಜೊತೆಗೆ ಕ್ಯೂಟ್‌ ಆದ ಲವ್‌ಸ್ಟೋರಿಯೂ ಇದೆ.

ನಿರ್ದೇಶಕರು ಮೊದಲ ನಿರ್ದೇಶನದಲ್ಲೇ ಭರವಸೆ ಮೂಡಿಸಿದ್ದಾರೆ. ಒಂದು ಕಮರ್ಷಿಯಲ್‌ ಸಬ್ಜೆಕ್ಟ್ ಅನ್ನು ಅನಾವಶ್ಯಕ ದೃಶ್ಯಗಳಿಂದ ಮುಕ್ತಗೊಳಿಸಿ,ಇಡೀ ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಮುಖ್ಯವಾಗಿ ಈ ಸಿನಿಮಾ ನಿಂತಿರೋದು ಕೆಲವು ಪ್ರಮುಖ ಟ್ವಿಸ್ಟ್‌ಗಳ ಮೇಲೆ. ಆ ಟ್ವಿಸ್ಟ್‌ಗಳೇನು ಎಂಬುದನ್ನು ತೆರೆಮೇಲೆ ನೋಡಿದರೇನೇ ಚೆಂದ. ಇನ್ನು, ನಟ ಪ್ರಜ್ವಲ್‌ ದೇವರಾಜ್‌ ಅವರ ಕೆರಿಯರ್‌ನಲ್ಲಿ ಇದು ವಿಭಿನ್ನ ಚಿತ್ರ. ಅವರ ಈ ಹಿಂದಿನ ಇಮೇಜ್‌ ಅನ್ನು ಬದಲಿಸುವ ಎಲ್ಲಾ ಲಕ್ಷಣಗಳು ಈ ಸಿನಿಮಾದಲ್ಲಿ ಎದ್ದು ಕಾಣುತ್ತಿದೆ.

ಮೊದಲೇ ಹೇಳಿದಂತೆ ಚಿತ್ರದಲ್ಲಿ ನಟ ದರ್ಶನ್‌ ಅವರು ಕೂಡಾ ನಟಿಸಿದ್ದಾರೆ. ಅದೊಂದು ವಿಶೇಷ ಪಾತ್ರ. ಈ ಪಾತ್ರ ಕೂಡಾ ಸಿನಿಮಾದ ಮೈಲೇಜ್‌ ಹೆಚ್ಚಿಸಿದೆ. ಹೆಚ್ಚು ಲಾಜಿಕ್‌ ಹುಡುಕದೇ ಒಂದು ಕಮರ್ಷಿಯಲ್‌ ಸಿನಿಮಾವನ್ನು ಖುಷಿಯಿಂದ ಎಂಜಾಯ್‌ ಮಾಡುವ ಸಿನಿಮಾ ಪ್ರೇಮಿಗಳು ನೀವಾಗಿದ್ದರೆ ನಿಮಗೆ “ಇನ್ಸ್‌ಪೆಕ್ಟರ್‌ ವಿಕ್ರಂ’ ಖಂಡಿತಾ ನಿಮಗೆ ಇಷ್ಟವಾಗುತ್ತದೆ.

ಮೊದಲೇ ಹೇಳಿದಂತೆ ನಟ ಪ್ರಜ್ವಲ್‌ ದೇವರಾಜ್‌ ಪೊಲೀಸ್‌ ಆಫೀಸರ್‌ ಆಗಿ ಮಿಂಚಿದ್ದಾರೆ. ಈ ಹಿಂದಿನ ಪಾತ್ರಗಳಿಗೆ ಹೋಲಿಸಿದರೆ ಇದು ಅವರಿಗೆ ಹೊಸದು. ಅತ್ತ ಕಡೆ ಆಯಕ್ಷನ್‌, ಇತ್ತ ಕಡೆ ಲವ್‌ … ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುವ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ನಾಯಕಿ ಭಾವನಾ ಈ ಸಿನಿಮಾದ ಮತ್ತೂಂದು ಅಚ್ಚರಿ. ಇಲ್ಲಿ ಅವರು ಎರಡು ಶೇಡ್‌ನ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಅವರ ಹೊಸ ಗೆಟಪ್‌ ಚಿತ್ರದ ಟ್ವಿಸ್ಟ್‌ಗಳಲ್ಲೊಂದು. ರಘು ಮುಖರ್ಜಿಯವರ ಪಾತ್ರ ಕೂಡಾ ಸಿನಿಮಾದಲ್ಲಿ ಪ್ರಮುಖವಾಗಿದೆ. ಉಳಿದಂತೆ ಧರ್ಮಣ್ಣ ಹಾಗೂ ಇತರರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ತಾಂತ್ರಿಕವಾಗಿಯೂ ಈ ಸಿನಿಮಾ ಅದ್ಧೂರಿಯಾಗಿದೆ. ಛಾಯಾಗ್ರಾಹಕ ನವೀನ್‌ ಕುಮಾರ್‌ ಇಡೀ ಚಿತ್ರವನ್ನು ಹಬ್ಬದಂತೆ ಕಟ್ಟಿಕೊಟ್ಟರೆ ಸಂಗೀತ ನಿರ್ದೇಶಕ ಅನೂಪ್‌ ಸೀಳೀನ್‌ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಚಿತ್ರದ ವೇಗ ಹೆಚ್ಚಿಸಿದೆ.


Spread the love

About Laxminews 24x7

Check Also

ಬತ್ತಿದ ಮಲಪ್ರಭೆ, ಈ ನಾಲ್ಕು ಜಿಲ್ಲೆಗೆ ಜಲಕಂಟಕ

Spread the loveಬೆಳಗಾವಿ, ಮೇ.15: ಬೆಳಗಾವಿ(Belagavi) ಜಿಲ್ಲೆಯ ಕಣಕುಂಬಿ ಗ್ರಾಮದಲ್ಲಿ ಹುಟ್ಟುವ ಮಲಪ್ರಭಾ ನದಿ(Malaprabha River). ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ