ಗೋಕಾಕ: ಒಂದು ಸಲ ಬಿಟ್ಟು ಮೂರು ಬಾರಿ ತಿಳಿಸಿ ಹೇಳಿ. ಹೊಡೆಯುವದರಲ್ಲಿ ಏನೂ ಅರ್ಥವಿಲ್ಲ ಅದರಿಂದ ಪರಿಹಾರವೂ ಇಲ್ಲ. ಜನರಿಗೆ ತಿಳುವಳಿಕೆ ಹೇಳುವುದು ಮೊದಲು ಅಗತ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಂದು ನಗರದಲ್ಲಿ ಮಾತನಾಡಿ ಜನರು ಕೂಡ ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಿ, ಬಡೆಯುವಂತ ಅವಕಶ್ಯಕತೆಯಿಲ್ಲ. ಜನರು ನೀರು ಮತ್ತು ದಿನನಿತ್ಯದ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಏಕಾಏಕಿ ಬಂದ ಇಂತಹ ಸ್ಥಿತಿ ಇದೇ ಮೊದಲ ಬಾರಿಗೆ ಜನರು ಎದುರಿಸುತ್ತಿದ್ದು ಆತಂಕಕ್ಕೆ ಒಳಗಾಗಿದ್ದಾರೆ ಅವರನ್ನು ಜಾಗೃತಿ ಮೂಡಿಸಿ ಎಂದು ಪೊಲೀಸ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಿರ್ಗತಿಕರಿಗೆ ಊಟ ವ್ಯವಸ್ಥೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಜನರು ಪೊಲೀಸರಿಗೆ ಸಹಕರಿಸಿಬೇಕೆಂದು ಮನವಿ ಮಾಡಿದರು.
ಜನರು ಮತ್ತು ವ್ಯಾಪಾರಿಗಳ ಬೇಡಿಕೆಗಳನ್ನು ಕೇಳಿ ನಿಯಮಗಳನ್ನು ಸ್ವಲ್ಪ ಸಡಿಲಮಾಡಿ. ಸರಕು ಸಾಗಾಣಿಕೆಗಾಗಿ ಅವರಿಗೆ ಪಾಸ ಕೊಟ್ಟು ಅನುವು ಮಾಡಿಕೊಡಿ. ರೈತರಿಗೂ ತೊಂದರೆ ಕೊಟ್ಟಿರುವ ದೂರು ಬಂದಿವೆ. ಸರ್ಕಾರವೇ ರೈತರಿಗೆ ಕೆಲಸಮಾಡಲು ಅನುಮತಿ ನೀಡಿದೆ. ಹೀಗಿರುವಾಗ ಇವರನ್ನು ತೊಂದರೆ ಕೊಡುವುದು ಸರಿಯಲ್ಲ. ಆಹಾರ ಉತ್ಪನ್ನಗಳ ಬಂದ್ ಮಾಡಿಬಿಟ್ಟರೆ ಜನರ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.
ಆಹಾರ ಉತ್ಪನ್ನಗಳಿಗೆ ಮುಕ್ತವಾಗಿ ಸಾಗಾಣಿಕೆ ಮಾಡಲು ಅವಕಾಶ ಮಾಡಿಕೊಡಲು ಡಿಎಸ್ ಪಿ ಮತ್ತು ಸಿಪಿಐಗೆ ಸೂಚಿಸಿದ್ದೇನೆ. ತರಕಾರಿ ಮತ್ತು ಕಿರಾಣಿ ಖರೀದಿಗೆ ಈಗಾಗಲೇ ಇರುವ ಸಮಯವನ್ನು ಜನರು ಮತ್ತು ವ್ಯಾಪಾರಸ್ಥರು ವಿಸ್ತರಿಸಲು ಕೇಳಿಕೊಂಡರೆ ವಿಸ್ತರಿಸಿ ಎಂದು ಹೇಳಿದ್ದೇನೆ ಎಂದರು.