ಉತ್ತರಪ್ರದೇಶ : ಮಗಳನ್ನ ಹುಡುಕಿಕೊಡಿ ಎಂದು ಠಾಣೆಗೆ ಬಂದ ಮಹಿಳೆಯಿಂದ ಪೊಲೀಸರು 15 ಸಾವಿರ ರೂಪಾಯಿ ಮೌಲ್ಯದಷ್ಟು ಡಿಸೇಲ್ ತುಂಬಿಸಿಕೊಂಡಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ಈ ಕುರಿತು ನೊಂದ ಮಹಿಳೆ ಎಸ್ ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಏನಿದು ಘಟನೆ..?
ತಿಂಗಳ ಹಿಂದೆ ಅಂಗವಿಕಲೆ ಗುಡಿಯಾ ಎಂಬುವರ ಮಗಳು ನಾಪತ್ತೆಯಾಗಿದ್ದರು. ಈ ಕುರಿತು ಗುಡಿಯಾ, ತನ್ನ ಅಪ್ರಾಪ್ತ ಮಗಳನ್ನ ಠಾಕೂರ್ ಎಂಬಾತ ಅಪಹರಿಸಿದ್ದಾನೆ ಎಂದು ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು, ತನಿಖೆ ನೆಪದಲ್ಲಿ ತಮ್ಮ ವಾಹನಗಳಿಗೆ ಮಹಿಳೆ ಹಣದಿಂದ ಡಿಸೇಲ್ ತುಂಬಿಸಿಕೊಂಡಿದ್ದಾರೆ.
ಪ್ರತಿ ಬಾರಿ ಠಾಣೆಗೆ ಭೇಟಿ ನೀಡಿದಾಗಲೂ ಇದೇ ಮರುಕಳಿಸುತ್ತಿದ್ದರಿಂದ ಬೇಸತ್ತ ಮಹಿಳೆ ಮಗಳ ಬಗ್ಗೆ ಗಟ್ಟಿ ಧ್ವನಿಯಲ್ಲಿ ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಆಗ ಪೊಲೀಸರು ಆಕೆಯನ್ನ ನಿಂದಿಸಿ ಗದರಿಸಿದ್ದಾರೆ. ಇದರಿಂದ ನೊಂದ ಮಹಿಳೆ ನೇರವಾಗಿ ಎಸ್ ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ ಪಿ ಬ್ರಜೇಶ್ ಕುಮಾರ್ ಶ್ರೀವಾಸ್ತವ್, ಬೇಜವಾಬ್ದಾರಿ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
 Laxmi News 24×7
Laxmi News 24×7
				 
		 
						
					