ಮಂಗಳೂರು: ಮಹಾನಗರ ಪಾಲಿಕೆ ಟೌನ್ ಪ್ಲಾನಿಂಗ್ ನ ಜಂಟಿ ನಿರ್ದೇಶಕ ಜಯರಾಜ್ ಅವರ ಮನೆ ಹಾಗೂ ಪತ್ನಿ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ದಾಳಿಯಾಗಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಬಿಜೈನ ಕಾಪಿಕಾಡ್ ನಲ್ಲಿರುವ ಜಯರಾಜ್ ಅವರ ಫ್ಲ್ಯಾಟ್, ಮಹಾನಗರ ಪಾಲಿಕೆ ಕಚೇರಿ, ಪಡೀಲ್ ನಲ್ಲಿರುವ ಅವರ ತಂದೆ ಮನೆ ಹಾಗೂ ಪಾಂಡಿಚೇರಿಯಲ್ಲಿರುವ ಅವರ ಪತ್ನಿ ಮನೆಗೂ ದಾಳಿ ನಡೆದಿದ್ದು ವಿಚಾರಣೆ ತಪಾಸಣೆ ಮುಂದುವರಿದಿದೆ. ಇಂದು ಮುಂಜಾನೆಯಿಂದಲೇ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಬೆಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ ಕೋಲಾರ ಸೇರಿದಂತೆ ರಾಜ್ಯದ 7 ಕಡೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಚಿನ್ನಾಭರಣ ಸೇರಿದಂತೆ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ ಎಂದು ವರದಿಯಾಗಿದೆ.
Laxmi News 24×7