Breaking News

ಅಕ್ಕಿ ದೋಖಾ ಸೋನಾ ಮಸೂರಿಯಾಗಿ ರೂಪಾಂತರವಾಗುತ್ತೆ ಪಿಡಿಎಸ್ ಅಕ್ಕಿ?

Spread the love

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಅಕ್ಕಿ ಅಕ್ರಮ ಹೊಸದೇನಲ್ಲ. ಆಗಾಗ ದಾಳಿ ನಡೆಯುತ್ತಲೇ ಇರುತ್ತೆ. ಅಕ್ಕಿ ಕಳ್ಳರು ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈ ಬಾರಿ ಅಕ್ಕಿ ಕಳ್ಳಕೋರರಿಗೆ ದಾಳ ಉರುಳಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ಕಿ ಅಕ್ರಮಕ್ಕೆ ಕಡಿವಾಣ ಹಾಕುವುದು ತಡವಾಗುವ ವಿಷಯವೇ ಅಲ್ಲ. ಆದರೆ ಅಕ್ರಮಕ್ಕೆ ಕಡಿವಾಣ ಹಾಕಿದರೆ ಬೊಕ್ಕಣ ತುಂಬಲ್ಲವೆಂದು ಆಗಾಗ ಹುಲಿಯಂತೆ ದಾಳಿ ಮಾಡಿ ಇಲಿಯಂತೆ ಒಂದಿಷ್ಟು ಅಕ್ಕಿ ಚೀಲ ಹಿಡಿದು ಬಿಲ್ಡಪ್ ಕೊಡುತ್ತಾರೆ ಆಹಾರ ಇಲಾಖೆಯ ಅಧಿಕಾರಿಗಳು. ಹೀಗೇ ಮಾಡಿದರೆ ಮಾತ್ರ ಅಕ್ಕಿ ಅಕ್ರಮ ವ್ಯಾಪಾರಿಗಳು ತಿಂಗಳಿಗೊಮ್ಮೆ ಯೋಗಕ್ಷೇಮ ವಿಚಾರಿಸುತ್ತಾರೆ. ಹಾಗಾಗಿ ಈ ಅಕ್ರಮದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಸಹ ಪಾಲುದಾರರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಭತ್ತದ ಕಣಜ ಗಂಗಾವತಿ ಸೋನಾ ಮಸೂರಿ ಅಕ್ಕಿಗೆ ಫೇಮಸ್. ಮೊದಲು ಸಿಕ್ಕಾಪಟ್ಟೆ ಅಕ್ಕಿ ಗಿರಣಿಗಳಿದ್ದವು. ಅಂದಾಜಿನ ಪ್ರಕಾರ 2010ರಲ್ಲಿ 130ಕ್ಕೂ ಅಧಿಕ ಅಕ್ಕಿ ಗಿರಣಿಗಳಿದ್ದವು. 2020ರಲ್ಲಿ ಕೇವಲ 30-40 ಅಕ್ಕಿ ಗಿರಣಿಗಳು ಮಾತ್ರ ಉಳಿದುಕೊಂಡಿವೆ.ಸೋನಾ ಮಸೂರಿಯಾಗಿ ರೂಪಾಂತರವಾಗುತ್ತೆ ಪಿಡಿಎಸ್ ಅಕ್ಕಿ?

ಜಿಲ್ಲೆಯಲ್ಲಿ ಅಕ್ಕಿ ಸಂಗ್ರಹದ ಪ್ರಮುಖ ಕೇಂದ್ರ ಗಂಗಾವತಿ. ಇಲ್ಲಿನ ಎಪಿಎಂಸಿಯಲ್ಲಿ ಹಲವು ಟ್ರೇಡಿಂಗ್ ಕಂಪನಿಗಳಿವೆ. ಇಲ್ಲೆಲ್ಲ ಪಡಿತರ ಅಕ್ಕಿ ಸಂಗ್ರಹಿಸಲಾಗುತ್ತೆ. ಸಂಗ್ರಹಿಸಿದ ಪಡಿತರ ಅಕ್ಕಿಯನ್ನು ನೈಸಾಗುವಂತೆ ಪಾಲಿಶ್ ಮಾಡಿ 12-15 ರೂ.ಗಳಂತೆ (ಪ್ರತಿ ಕೆಜಿಗೆ) ಖರೀದಿಸಿದ ಪಿಡಿಎಸ್ ಅಕ್ಕಿಯನ್ನು ಸೋನಾ ಮಸೂರಿ ಅಕ್ಕಿ ಎಂದು ಪ್ರತಿ ಕೆಜಿಗೆ 75-85 ರೂ.ಗಳಂತೆ ಮಾರಾಟ ಮಾಡಲಾಗುತ್ತೆ. ಪಡಿತರ ಅಕ್ಕಿಯನ್ನೇ ಬಳಸುವ ಕೆಲ ಶ್ರೀಮಂತರು ಸೋನಾ ಮಸೂರಿ ಅಕ್ಕಿ ಬಳಸುತ್ತೇವೆ ಎಂದು ಬೀಗುತ್ತಾರಷ್ಟೇ.


Spread the love

About Laxminews 24x7

Check Also

14 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ನಿಪ್ಪಾಣಿ ಯುವಕನಿಗೆ 30 ವರ್ಷ ಜೈಲು ಶಿಕ್ಷೆ

Spread the love 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ನಿಪ್ಪಾಣಿ ಯುವಕನಿಗೆ 30 ವರ್ಷ ಜೈಲು ಶಿಕ್ಷೆ ನಿಪ್ಪಾಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ