Breaking News
Home / Uncategorized / ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಪಕ್ಷವೇನಾದರೂ ಇದ್ದರೆ ಅದು ಬಿಜೆಪಿ ಮಾತ್ರ – ಕಾಂಗ್ರೆಸ್ ಕಿಡಿ

ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಪಕ್ಷವೇನಾದರೂ ಇದ್ದರೆ ಅದು ಬಿಜೆಪಿ ಮಾತ್ರ – ಕಾಂಗ್ರೆಸ್ ಕಿಡಿ

Spread the love

ಬೆಂಗಳೂರು : ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಪಕ್ಷವೇನಾದರೂ ಇದ್ದರೆ ಅದು ಕರ್ನಾಟಕ ಬಿಜೆಪಿ ಮಾತ್ರ. ನಾಡಿಗೆ ಹಸಿವಿನ ಚಿಂತೆ, ಯುವಕರಿಗೆ ಉದ್ಯೋಗದ ಚಿಂತೆ, ರೈತರಿಗೆ ಬದುಕಿನ ಚಿಂತೆ,ಸರ್ಕಾರಕ್ಕೆ ಮಾತ್ರ ಲೂಟಿಯದ್ದೇ ಚಿಂತೆಯಾಗಿದೆ. ದಿನಕ್ಕೆ ಎರೆಡೆರೆಡು ಭಾರಿ ಖಾತೆ ಬದಲಾವಣೆ ಮಾಡುತ್ತಾ, ಅಭಿವೃದ್ಧಿ ಮರೆತ ಬಿಜೆಪಿಯಿಂದ ರಾಜ್ಯ ನಲುಗುತ್ತಿದೆ ಎಂಬುದಾಗಿ ಕಾಂಗ್ರೆಸ್ ಕಿಡಿ ಕಾರಿದೆ.

ಈ ಕುರಿತಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸರಣಿ ಟ್ವಿಟ್ ಮಾಡಿದ್ದು, ಎಪಿಎಂಸಿ ಮುಚ್ಚಿ ರೈತರನ್ನು ಕಾರ್ಪೊರೇಟ್ ಕಂಪೆನಿಗಳ ಜೀತಕ್ಕೀಡುವ ಬಿಜೆಪಿ ಹುನ್ನಾರವನ್ನ ಅದರ ನಾಯಕರೇ ಬಾಯಿ ಬಿಡುತ್ತಿದ್ದಾರೆ, ಸುಳ್ಳುಗಳು ಬಯಲಾಗುತ್ತಿವೆ. ಸಚಿವ ಜಗದೀಶ್ ಶೆಟ್ಟರ್ ಅವರೆ, ಎಪಿಎಂಸಿ ಮುಚ್ಚಿಸಿ ರೈತರನ್ನು ಕಂಪೆನಿಗಳ ಗುಲಾಮರನ್ನಾಗಿಸುವ ನಿಮ್ಮ ಉದ್ದೇಶ ರೈತರಿಗೆ ತಿಳಿದಿದೆ ಎಂದಿದೆ.

Image

ಪತ್ರಿಕಾಗೋಷ್ಠಿ ನಡೆಸಿ ದೇಶದ ಜನತೆಯ ಪ್ರಶ್ನೆಗೆ ಉತ್ತರಿಸುವುದಿಲ್ಲ. ಹಲವು ದಿನಗಳಿಂದ ರೈತರು ಪ್ರತಿಭಟಿಸುತ್ತಿದ್ದರೂ ರೈತರೊಂದಿಗೆ ಚರ್ಚಿಸುವ ಧೈರ್ಯ ತೋರಲಿಲ್ಲ. ನರೇಂದ್ರ ಮೋದಿ ಅವರನ್ನ ಉತ್ತರ ಕೊಡಲು ಹಿಂಜರಿಯುವ ಉತ್ತರಕುಮಾರ ಎನ್ನಬಹುದು ಅಲ್ಲವೇ ಬಿಜೆಪಿ.? ಎಂದು ಪ್ರಶ್ನಿಸಿದೆ.

ಎಪಿಎಂಸಿ ವ್ಯವಸ್ಥೆಯನ್ನು ಹಂತ ಹಂತವಾಗಿ ಶಿಥಿಲಗೊಳಿಸಿ, ಕಾರ್ಪೊರೇಟ್ ಕಂಪೆನಿಗಳ ಖಾಸಗಿ ಮಾರುಕಟ್ಟೆಗೆ ರೈತರ ಹಿತ ಬಲಿಕೊಡುವ ಹುನ್ನಾರ ಹೊಂದಿರುವ ಕಾಯ್ದೆಗಳಿವು. ರೈತನ ಅಸ್ಥಿರಗೊಳಿಸಿ ದೇಶ ಉದ್ದಾರವಾಗಲಾರದು ಎನ್ನುವುದನ್ನ ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ಬಿಜೆಪಿ ಅಂದು ದಲ್ಲಾಳಿಗಳ ಪರ, ಇಂದು ಕಾರ್ಪೊರೇಟ್ ದಣಿಗಳ ಪರ, ಈ ಯೂ ಟರ್ನ್ ಏಕೆ ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿಗರೇ, ಅಂದು ನೀವೇ ಹೇಳಿದ್ದು ಕಾರ್ಪೊರೇಟ್ ಕಂಪೆನಿಗಳಿಂದ ರೈತರಿಗೆ ಹಾನಿ. ಈಗ ಯೂ ಟರ್ನ್ ಏಕೆ? ರೈತರನ್ನು ಕಾರ್ಪೊರೇಟ್ ಕಂಪೆನಿಗಳ ಜೀತದಾಳುಗಳನ್ನ ಮಾಡುತ್ತಿರುವುದೇಕೆ ಬಿಜೆಪಿ ಎಂದು ಕಿಡಿಕಾರಿದೆ.


Spread the love

About Laxminews 24x7

Check Also

ಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

Spread the loveಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬೆಂಗಳೂರು, ಮೇ. 03 : ಬೆಂಗಳೂರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ