Breaking News
Home / ರಾಜಕೀಯ / ಕೊರೊನಾ ಅವಧಿಯಲ್ಲಿ ಭಾರತದ 100 ಬಿಲಿಯನೇರ್‌ಗಳ ಆದಾಯ ಏರಿಕೆ

ಕೊರೊನಾ ಅವಧಿಯಲ್ಲಿ ಭಾರತದ 100 ಬಿಲಿಯನೇರ್‌ಗಳ ಆದಾಯ ಏರಿಕೆ

Spread the love

ನವದೆಹಲಿ : ವಿಶ್ವಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಿಸಿ ಜಾಗತಿಕ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟು ಮಾಡಿದೆ. ಈ ಮಹಾಮಾರಿ ಪ್ರಭಾವ ನಮ್ಮ ದೇಶದ ಆರ್ಥಿಕತೆ ಮೇಲೂ ಆಗಿದೆ. ಆದರೆ, ನಮ್ಮ ಶತಕೋಟಿ ಶ್ರೀಮಂತರ ಆರ್ಥಿಕ ಸ್ಥಿತಿ ಮೇಲೆ ಮಾತ್ರ ಕಿಂಚಿತ್ತು ಪರಿಣಾಮ ಆಗಿಲ್ಲ ಎಂಬುದು ಆಶ್ಚಯಕರ ಸಂಗತಿ!
ಕೋವಿಡ್-19 ಸಾಂಕ್ರಾಮಿಕ ರೋಗ ವಿಶ್ವಕ್ಕೆ ಅಪ್ಪಳಿಸಿದ ಪರಿಣಾಮ ಪ್ರಪಂಚಾವೇ ಲಾಕ್‍ಡೌನ್ ಆಗಿತ್ತು.

ಜÁಗತಿಕ ಆರ್ಥಿಕ ಸ್ಥಿತಿ ಸ್ತಬ್ಧವಾಗಿತ್ತು. ಬೃಹತ್ ಕಂಪನಿಗಳು ಮುಚ್ಚಲ್ಪಟ್ಟವು. ಆರ್ಥಿಕ ಸ್ಥಿತಿ ದುಸ್ಥಿತಿಗೆ ತಲುಪಿದ್ದ ಆ ಅವಧಿ ಪ್ರಭಾವ ಭಾರತೀಯ ಬಿಲಿಯನೇರ್‍ಗಳ ಮೇಲೆ ಆಗಿಲ್ಲ ಎಂಬ ವರದಿ ಆಕ್ಸಫಾಮ್ ಪ್ರಕಟಿಸಿದೆ. ಕಳೆದ ಮಾರ್ಚ್‍ನಿಂದ ಭಾರತದ ಪ್ರಭಾವಶಾಲಿ 100 ಅಗ್ರ ಬಿಲಿಯನೇರ್‍ಗಳು ತಮ್ಮ ಆದಾಯವನ್ನು 12,97,822 ಕೋಟಿ ರೂ.ಗಳಷ್ಟು ಹೆಚ್ಚಿಸಿದ್ದಾರೆ ಎಂದು ತಿಳಿಸಿದೆ. ಇದು ಸುಮಾರು 138 ಕೋಟಿ ಬಡ ಭಾರತೀಯ ಪ್ರಜೆಗಳಿಗೆ ತಲಾ 94,045 ರೂ.ನಂತೆ ಹಂಚಬಹುದಾಗಿದೆ. ಕಾರಣ ವೈರಾಣು ಹರಡುವಿಕೆಯಲ್ಲಿ ಬಡವ-ಬಲ್ಲಿದ ಎಂಬ ವ್ಯತ್ಯಾಸವಿಲ್ಲ ಕೂಡ ಹೇಳಿದೆ.

ದಾವೋಸ್‍ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಫೋರಂನ ಮೊದಲ ದಿನದ ಅಧಿವೇಶನದಲ್ಲಿ ಆಕ್ಸಫಾಮ್ ಈ ವರದಿ ಬಿಡುಗಡೆ ಮಾಡಿದ್ದು, ಕೊರೊನಾ ವೈರಸ್ ಸಾಂಕ್ರಾಮಿಕ ಶತಮಾನದ ಅತಿ ದೊಡ್ಡ ದುಸ್ಥಿತಿಗೆ ಕಾರಣವಾಗಿದೆ. 1930ರ ಜಾಗತಿಕ ಆರ್ಥಿಕ ಕುಸಿತದ ಮಟ್ಟಕ್ಕೆ ಕೊಂಡೊಯ್ದಿದೆ. ಅಂದು ವಿಶ್ವ ಕಂಡ ಭಾರಿ ಆರ್ಥಿಕ ಕುಸಿತಕ್ಕೆ ಹೋಲಿಸಬಹುದಾಗಿದೆ. ಆದರೆ, ಭಾರತದ 100 ಬಿಲಿಯನೇರ್‍ಗಳ ಆರ್ಥಿಕ ಭವಿಷ್ಯ ಮಾತ್ರ ತದ್ವಿರುದ್ಧ. ಕೋಟ್ಯಧಿಪತಿಗಳ ಆರ್ಥಿಕ ಚೇತರಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಈ ಶತಕೋಟಿ ಒಡೆಯರ ಆದಾಯ ಕಳೆದ ಮಾರ್ಚ್‍ನಿಂದ ಇಲ್ಲಿಯವರೆಗೆ 12 ಲಕ್ಷ 97 ಸಾವಿರದ 822 ಕೋಟಿ ರೂ.ಗಳಿಗೆ ಏರಿಕೆಯಾಗಿ ವಿಶ್ವವನ್ನು ಬೆರಗುಗೊಳಿಸಿದೆ. ಈ ಹಣ 138 ಕೋಟಿ ಭಾರತೀಯರಿಗೆ ತಲಾ 94,045 ರೂ.ಗಳಂತೆ ನೀಡಬಹುದಾಗಿದೆ ಎಂದು ಅಕ್ಸಫಾಮ್ ಹೇಳಿದೆ. ಅಲ್ಲದೆ, 79 ದೇಶಗಳ 295 ನಿಯೋಜಿತ ಆರ್ಥಿಕತಜ್ಞರು ಜಾಗತಿಕ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ ಎಂದಿದೆ.

ತಜ್ಞರ ವರದಿ ಪ್ರಕಾರ ಗೌತಮ್ ಅದಾನಿ, ಶಿವ್ ನಾಡರ್, ಸೈರಸ್ ಪೂನಾವಾಲ, ಉದಯ್ ಕೊಟಕ್, ಅಜೀಂ ಪ್ರೇಮ್‍ಜಿ, ಸುನಿಲ್ ಮಿಟ್ಟಲ್, ರಾಧಾಕೃಷ್ಣ ದಮಾನಿ, ಕುಮಾರ್ ಮಂಗಳಂ ಬಿರ್ಲಾ ಹಾಗೂ ಲಕ್ಷ್ಮೀ ಮಿಟ್ಟಲ್ 100 ಬಿಲಿಯನೇರ್‍ಗಳಲ್ಲಿ ಒಳಗೊಂಡಿದ್ದಾರೆ.

2020 ಮಾರ್ಚ್‍ನಲ್ಲಿ ಘೋಷಿಸಿದ ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ಅದಿರು, ತೈಲ, ಟೆಲಿಕಾಂ, ಔóಷಧ, ಫಾರ್ಮಾಸ್ಯುಟಿಕಲ್, ಶಿಕ್ಷಣ ಮತ್ತು ರಿಟೈಲ್ ಉದ್ಯಮಗಳಲ್ಲಿ ಆರ್ಥಿಕತೆ ಸ್ತಬ್ಧವಾಗಿದ್ದರೂ ಲಕ್ಷಾಂತರ ಕೋಟಿ ರೂ. ಆದಾಯ ಗಳಿಸಿದ್ದಾರೆ.  ಈ ಅವಧಿಯಲ್ಲಿ ದೇಶದಲ್ಲಿ 17 ಲಕ್ಷ ಮಂದಿ ಕೆಲಸ ಕಳೆದುಕೊಂಡಿರುವುದು ನೆನಪಿಸಿಕೊಳ್ಳಬಹುದು ಎಂಬುದನ್ನು ವರದಿಯಲ್ಲಿ ಹೇಳಿದೆ.


Spread the love

About Laxminews 24x7

Check Also

ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ.: ಲಕ್ಷ್ಮೀ ಹೆಬ್ಬಾಳ್ಕರ್

Spread the love ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ