Breaking News

BIG BREAKING : ನಾಳೆ 3.50ಕ್ಕೆ ನೂತನ ಸಚಿವರ ಪ್ರಮಾಣವಚನ : 8 ಶಾಸಕರು ಸಂಪುಟ ಸೇರ್ಪಡೆ – ಸಿಎಂ ಯಡಿಯೂರಪ್ಪ

Spread the love

ಬೆಂಗಳೂರು : 7 ರಿಂದ 8 ಶಾಸಕರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವ ಬಗ್ಗೆ ನಾಳೆ 3.50 ಗಂಟೆಗೆ ತೀರ್ಮಾನ ಕೈಗೊಳ್ಳಲಾಗುವುದು. ನಾಳೆ 7 ರಿಂದ 8 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ಒಬ್ಬರನ್ನು ಕೈಬಿಡುವ ಚರ್ಚೆ ಕೂಡ ನಡೆದಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಿಎಂ ಯಡಿಯೂರಪ್ಪ ಅವರು, ನಾಳೆ ಸಂಜೆ 3.50ಕ್ಕೆ ನೂತನ ಸಚಿವರು ಸಂಪುಟ ಸೇರ್ವಡೆಗೊಳ್ಳಲಿದ್ದಾರೆ. 7 ರಿಂದ 8 ಶಾಸಕರು ನೂತನ ಸಚಿವರು ಸೇರ್ವಡೆಗೊಳ್ಳುವ ಚರ್ಚೆ ನಡೆಯುತ್ತಿದೆ. ಇಂದು ಸಂಜೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.

ಇದೇ ವೇಳೆ ಸಾರ್ 7 ಸಚಿವ ಸ್ಥಾನ ಮಾತ್ರ ಖಾಲಿ ಇದೆ. ನೀವು 7 ರಿಂದ 8 ಶಾಸಕರು ನೂತನ ಸಚಿವ ಸಂಪುಟ ಸೇರ್ಪಡೆಗೊಳ್ಳಲಿದ್ದೀರಿ ಎಂದು ಹೇಳುತ್ತಿದ್ದೀರಿ.

ಹಾಗಾದ್ರೇ ಯಾರನ್ನಾದ್ರೂ ಒಬ್ಬರು ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತಿದ್ಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದಂತ ಅವರು, ಆ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದು ಸಂಜೆ ಪಟ್ಟಿ ಬಿಡುಗಡೆ ಆಗಲಿದೆ. ನಾಳೆ ಸಂಜೆ 3.50ಕ್ಕೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ