Breaking News

ಎಚ್ಚರ..ನಿಮ್ಮ ವಾಟ್ಸಪ್‌ಗ್ರೂಪ್ ಗೆ ‘ಅಪರಿಚಿತರು’ ಈ ರೀತಿ ಸೇರಿಕೊಳ್ತಾರಂತೆ..?

Spread the love

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಿಮ್ಮ ಕಚೇರಿಯ ಸಹೋದ್ಯೋಗಿಗಳನ್ನು ಒಳಗೊಂಡಿರುವ ವಾಟ್ಸ್ ಆಪ್ ಗ್ರೂಪ್ ನಲ್ಲಿ ಮಹತ್ವದ ವಿವರಗಳನ್ನು ಚರ್ಚಿಸುತ್ತಿರುವಾಗ, ಇದ್ದಕ್ಕಿದ್ದಂತೆ ಅಪರಿಚತ ವ್ಯಕ್ತಿಯು ಸೇರಿಕೊಂಡರೇ ಏನಾಗಬೇಡ ಒಮ್ಮೆ ಯೋಚನೆ ಮಾಡಿ, ಹೌದು, ಗೂಗಲ್ ಸರ್ಚ್ ಮೂಲಕ ನಿಮ್ಮ ಖಾಸಗಿ ಗ್ರೂಪ್ ಚಾಟ್‌ಗೆ ಪ್ರವೇಶ ಪಡೆಯ ಬಹುದು ಎನ್ನಲಾಗಿದ್ದು, ಇದೊಂದು ಸಮಸ್ಯೆಯಾಗಲಿದೆ ಎನ್ನಲಾಗಿದೆ. ಅಂದ ಹಾಗೇ 2019ರಲ್ಲಿ ಈ ಸಮಸ್ಯೆ ಬಗೆಹರಿಸಲಾಗಿತ್ತು ಆದರೆ ಈಗ ಮತ್ತೆ ಬೆಳಕಿಗೆ ಬಂದಿದೆ ಎನ್ನಲಾಗಿದ್ದು, ವಾಟಫ್ಸ್‌ ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನಿಸುವುದಕ್ಕೆ ಶುರುವಾಗಿದೆ.

ಇಂಟರ್ನೆಟ್ ಸೆಕ್ಯುರಿಟಿ ಸಂಶೋಧಕ ರಾಜಶೇಖರ್ ರಾಜಹರಿಯಾ (@rajaharia) ಹೊಸ ವರದಿಪ್ರಕಾರ, ಬಳಕೆದಾರರು ಪ್ರವೇಶಿಸಲು ಅನುಮತಿಸಲು ಲಿಂಕ್ ಗಳನ್ನು ಬಳಸುವ ವಾಟ್ಸ್ ಆಪ್ ಗ್ರೂಪ್ ಗಳು ಮತ್ತೊಮ್ಮೆ ಆನ್ ಲೈನ್ ನಲ್ಲಿ (ಗೂಗಲ್‌ ಸರ್ಚ್‌) ಕಂಡುಬರಬಹುದು ಅಂಥ ತಿಳಿಸಿದ್ದಾರೆ. ಸೈದ್ಧಾಂತಿಕವಾಗಿ ಯಾರು ಬೇಕಾದರೂ ಗುಂಪಿಗೆ ಸೇರಲು ಇದು ಅವಕಾಶ ನೀಡುತ್ತದೆ ಅಂತ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಪ್ರೊಫೈಲ್ ಚಿತ್ರಗಳ ಜೊತೆಗೆ ಬಳಕೆದಾರರ ಫೋನ್ ಸಂಖ್ಯೆಗಳನ್ನು ಹುಡುಕಲು ಅಪರಿಚಿತರಿಗೆ ಅವಕಾಶ ನೀಡುತ್ತದೆ. ಈ ಗುಂಪಿನೊಳಗೆ ಈ ಅನಪೇಕ್ಷಿತ ವ್ಯಕ್ತಿಗಳನ್ನು ಯಾರೂ ಗಮನಿಸದಿದ್ದಲ್ಲಿ, ವಾಟ್ಸಾಪ್ ಗ್ರೂಪ್‌ ಅನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಮಾಡಬಹುದಂತೆ. 2019ರಲ್ಲಿ ಇದೇ ಸಮಸ್ಯೆ ಪತ್ತೆಯಾಗಿತ್ತು, ಭದ್ರತಾ ಸಂಶೋಧಕ, ರಾಜಶೇಖರ್ ರಾಜಹರಿಯಾ ಫೇಸ್ ಬುಕ್ ಗೆ ಈ ವಿಷಯವನ್ನು ವರದಿ ಮಾಡಿದ್ದರು. ನಂತರ ಈ ವಿಷಯ ಬಹಿರಂಗಗೊಂಡು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಫೇಸ್ ಬುಕ್ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್ ಫಾರ್ಮ್ ನ ಗೌಪ್ಯತಾ ನೀತಿಯಲ್ಲಿ ಇತ್ತೀಚೆಗೆ ಅಪ್ ಡೇಟ್ ಕೂಡ ಆಗಿದೆ. ಇದರಿಂದ ಅಸಮಾಧಾನಗೊಂಡಿರುವ ಆಪ್ ಬಳಕೆದಾರರು ಬೇರೆ ಆಯಪ್ ಗಳಿಗೆ ವಲಸೆ ಹೋಗುತ್ತಿದ್ದಾರೆ.

 


Spread the love

About Laxminews 24x7

Check Also

ದೇವೇಗೌಡರ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು

Spread the love ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ