Breaking News
Home / Uncategorized / ಈ ವರ್ಷ ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಕ್ಕೂ ಅಡ್ಡಿ

ಈ ವರ್ಷ ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಕ್ಕೂ ಅಡ್ಡಿ

Spread the love

ನವದೆಹಲಿ: ಕೊರೊನಾ ಭೀತಿಯಿಂದಾಗಿ ಈ ವರ್ಷ ಎಲ್ಲಾ ಹಬ್ಬ, ಆಚರಣೆ, ಸಡಗರ-ಸಂಭ್ರಮಗಳಿಗೆ ಬ್ರೇಕ್ ಬಿದ್ದಿದ್ದು. ಇದೀಗ ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಕ್ಕೂ ಅಡ್ಡಿಯುಂಟಾಗಿದೆ.

ದೆಹಲಿಯ ರಾಜಪಥದಲ್ಲಿ ನಡೆಯುವ ವಿಜೃಂಭಣೆಯ ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಮದಲ್ಲಿ ಕೊರೊನಾ ಕಾರಣದಿಂದಾಗಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಪ್ರತಿವರ್ಷ ವಿಜಯ್ ಚೌಕ್ ನಿಂದ ಆರಂಭವಾಗಿ ಕೆಂಪುಕೋಟೆವರೆಗೂ ಸಾಗುತ್ತಿದ್ದ ಪರೇಡ್ ಈ ವರ್ಷ ನ್ಯಾಷನಲ್ ಸ್ಟೇಡಿಯಂವರೆಗೆ 3.3 ಕಿ.ಮೀ ವರೆಗೆ ಸಾಗಲಿದೆ.

ರಾಜಪಥದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಣೆಗೆ 1,5,000 ಲಕ್ಷ ಜನರಿಗೆ ಪರೇಡ್ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತಿತ್ತು. ಆದರೆ ಈ ಬಾರಿ 25,000 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನು ಪರೇಡ್ ವೀಕ್ಷಣೆಗೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಕೊರೊನಾ ಕಾರಣದಿಂದಾಗಿ ಗಣರಾಜ್ಯೋತ್ಸವ ಇತಿಹಾಸದಲ್ಲೇ ಮಹತ್ವದ ಬದಲಾವಣೆ ಮಾಡಲಾಗಿದ್ದು, ಪರೇಡ್ ತಂಡದಲ್ಲಿದ್ದ 114 ಜನರನ್ನು 96 ಜನರಿಗೆ ಕಡಿತಗೊಳಿಸಲಾಗಿದೆ. ಒಟ್ಟಾರೆ ಕೊರೊನಾ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸ ಆಚರಣೆಯಲ್ಲೂ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ.


Spread the love

About Laxminews 24x7

Check Also

ಮೂರನೇ ಹಂತದ ಚುನಾವಣೆಗೆ ಸಿದ್ಧತೆ: ಮೇ 7ರಂದು ಮತದಾನ

Spread the loveಮೂರನೇ ಹಂತದ ಚುನಾವಣೆಗೆ ಸಿದ್ಧತೆ: ಮೇ 7ರಂದು ಮತದಾನ ಭಾರತದಲ್ಲಿ ಈಗಾಗಲೇ ಎರಡು ಹಂತದ ಮತದಾನ ಮುಕ್ತಾಯಗೊಂಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ