Breaking News

ದುಬೈನಲ್ಲಿ ಭಾರತೀಯನಿಗೆ ಹೊಡೀತು 7 ಕೋಟಿ ರೂ. ಜಾಕ್‍ಪಾಟ್..!

Spread the love

ದುಬೈ, ಡಿ. 22- ಕೊರೊನಾ ಲಾಕ್‍ಡೌನ್‍ನಿಂದಾಗಿ ಹಲವರ ಬದುಕು ದುಸ್ತರವಾಗಿದ್ದು ತುತ್ತಿನ ಚೀಲ ತುಂಬಿಸಿಕೊಳ್ಳಲು ಹರಸಾಹಸಪಡುವಂತಾಗಿದೆ. ಇದೇ ರೀತಿ ಕೇರಳದ ವ್ಯಕ್ತಿಯೊಬ್ಬರು ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು ಕೆಲಸಕ್ಕಾಗಿ ಕಂಪೆನಿಗಳಿಗೆ ಅಲೆಯುತ್ತಿರುವಾಗಲೇ 7 ಕೋಟಿ ಜಾಕ್‍ಪಾಟ್ ಹೊಡೆಯುವ ಮೂಲಕ ಅವನ ಅದೃಷ್ಟವನ್ನೇ ಬದಲಿಸಿದೆ.

ಕೇರಳ ಮೂಲದ ನವನೀತ್ ಸಂಜೀವನ್ ಎಂಬುವವರು ದುಬೈನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉತ್ತಮ ಕೆಲಸದಲ್ಲಿದ್ದು ಒಳ್ಳೆಯ ಸಂಬಳವನ್ನು ಪಡೆಯುತ್ತಿದ್ದರೂ ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಅವರು ಕೆಲಸ ಕಳೆದುಕೊಂಡಿದ್ದರು. ಆಗ ನವನೀತ್ ದುಬೈ ಡ್ಯೂಟಿ ಫ್ರೀ ರಾಫೆಲ್‍ನಲ್ಲಿ ಲಾಟರಿ ಟಿಕೆಟ್ ಖರೀದಿಸಿದ್ದರು, ಈಗ ಆ ನಂಬರ್‍ಗೆ 7.3 ಕೋಟಿ ರೂ. ಜಾಕ್‍ಪಾಟ್ ಹೊಡೆಯುವ ಮೂಲಕ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿದೆ.ಸುದ್ದಿಗಾರರೊಂದಿಗೆ ಮಾತನಾಡಿದ ನವನೀತ್, ಕೊರೊನಾ ಲಾಕ್‍ಡೌನ್‍ನಿಂದಾಗಿ ನಾನು ಕೆಲಸ ಕಳೆದುಕೊಂಡಾಗ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು, ಹಲವು ಕಂಪೆನಿಗಳಲ್ಲಿ ಕೆಲಸಕ್ಕಾಗಿ ಅಲೆಯುತ್ತಿದ್ದೆ, ಆದರೆ ಈಗ ನನ್ನ ಅದೃಷ್ಟ ಖುಲಾಯಿಸಿದ್ದು ನಾನು ಕೊಂಡ ಲಾಟರಿ ಟಿಕೆಟ್‍ಗೆ 7.3 ಕೋಟಿ ಬಂಪರ್ ಬಹುಮಾನ ಬಂದಿರುವುದು ನನ್ನ ಭವಿಷ್ಯ ಬದಲಾಯಿಸಿದೆ, ಈ ಬಹುಮಾನವನ್ನು ನನ್ನ ಕನಸನ್ನೆಲ್ಲಾ ನಿಜ ಮಾಡಲಿದೆ ಎಂದು ಸಂತಸ ಹಂಚಿಕೊಂಡರು.


Spread the love

About Laxminews 24x7

Check Also

ರಸ್ತೆ ದುರಸ್ತಿಗೆ ರೋಡ್​ನಲ್ಲಿ ಹೋಮ: ಈಗಲೂ ಸರಿಪಡಿಸದಿದ್ದರೆ ಮತ್ತೊಂದು ಪ್ರತಿಭಟನೆ

Spread the loveರಸ್ತೆ ದುರಸ್ತಿಗೆ ರೋಡ್​ನಲ್ಲಿ ಹೋಮ: ಈಗಲೂ ಸರಿಪಡಿಸದಿದ್ದರೆ ಮತ್ತೊಂದು ಪ್ರತಿಭಟನೆ   ಹಾವೇರಿ: ರಾಣೆಬೆನ್ನೂರಿನ ಗೌರಿಶಂಕರ್ ನಗರದ 2ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ