Breaking News

ಮುಷ್ಕರ ಕೈ ಬಿಡುವಂತೆ ಸಾರಿಗೆ ಸಿಬ್ಬಂದಿಗೆ ಸಿಎಂ ಮನವಿ

Spread the love

ಬೆಂಗಳೂರು:ಸಾರಿಗೆ ಇಲಾಖೆಯಲ್ಲಿ ನಾಲ್ಕು ಕಾರ್ಪೋರೇಶನ್ ಗಳು ಬಹುತೇಕ ಕೊರೋನಾ ಹೊಡೆತಕ್ಕೆ ಎಲ್ಲವೂ ನಷ್ಟದಲ್ಲಿವೆ. ಸಂಬಳಗಳ ಹಂಚಿಕೆಯಲ್ಲಿ ವಿಳಂಬವಾಗಿದೆ, ಇಲ್ಲ ಎಂದು ಯಾರೂ ಹೇಳುತ್ತಿಲ್ಲ, ದುಡ್ಡು ಬಂದ ಮೇಲೆ ಬಿಡುಗಡೆ ಮಾಡಿದ್ದು ಸುಳ್ಳಲ್ಲ, ಸಾರಿಗೆ ಮಂತ್ರಿ, ಮುಖ್ಯಮಂತ್ರಿಗಳು ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಅನ್ನುವವದು ಸರಿಯಲ್ಲ.

ಪುಣ್ಯಕ್ಕೆ ಪಕ್ಕದ ತೆಲಂಗಾಣದ KCR ತರ 48000 ನೌಕರರನ್ನು ಮನೆಗೆ ಕಳಿಸಿಲ್ಲ. ನಿಮ್ಮ ಬೇಡಿಕೆಗಳ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರ ನ್ಯಾಯ ಸಮ್ಮತವಲ್ಲವೆಂದು ಯಾರೂ ಹೇಳುವದಿಲ್ಲ. ಆದರೆ ಈ ಸಮಯದಲ್ಲಿ ಮುಷ್ಕರಕ್ಕೆ ಧಿಡೀರನೆ ಮುಷ್ಕರಕ್ಕೆ ಇಳಿದಿರುವದು ಸರಿಯಲ್ಲ, ಯಾರೂ ಸಮರ್ಥನೆ ಮಾಡುವದಿಲ್ಲ.

 

 

ಸರಕಾರಿ ನೌಕರರ ಸ್ಥಾನ ಮಾನ ದೇಶದಲ್ಲಿ ಯಾವುದೇ ರಾಜ್ಯ ಸರಕಾರಗಳು ಕೊಡದೇ ಇರುವಾಗ ನಿಮಗೆ (KSRTC +2,ಬಿಎಂಟಿಸಿ, ) ಹೇಗೆ ಕೊಡಲು ಸಾಧ್ಯ? ಸಾರಿಗೆ ನೌಕರರ ಒಕ್ಕೂಟದವರಿಗೆ ಈ ಸಮಯದಲ್ಲಿ ಧಿಡೀರ್ ಮುಷ್ಕರ ಮಾಡಲು ಸಲಹೆ ಕೊಟ್ಟವರು ಯಾರು? ಈ ಸಮಯ ಸೂಕ್ತವೇ? ಸೋಮವಾರದಿಂದ ಸಾರ್ವಜನಿಕರಿಗೆ ಒಂದಿಲ್ಲ ಒಂದು ರೀತಿಯಲ್ಲಿ ರೈತ ಮುಷ್ಕರ, ಬಾರ್ಕೋಲ್ ಮುಷ್ಕರ, ರಾಜಭವನ ಮುತ್ತಿಗೆ,ವಿಧಾನ ಸೌಧ ಮುತ್ತಿಗೆ ಹೆಸರಲ್ಲಿ ಸಾಕಾಷ್ಟು ತೊಂದರೆ ಯಾಗಿದೆ.

ಬಿಸಿಯಲ್ಲಿ ಬಿಸಿ ಮುಟ್ಟಿಸಿ ಅವಕಾಶವಾದಿಗಳಾಗಿ ಕಾರ್ಯ ಸಾಧಿಸಿಕೊಳ್ಳೋಣ ಅಂದರೆ,ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಅದು ಆಗದ ಮಾತು.

ಸರಕಾರ ಅಧಿವೇಶದಲ್ಲಿದೆ ಮಹತ್ವದ ಬಿಲ್ಲುಗಳನ್ನು ಪಾಸ್ ಮಾಡಬೇಕಿದೆ, ನೀವು ಕೇಳಿದ ತಕ್ಷಣ ಯಾವೂದೂ ತಕ್ಷಣಕ್ಕೆ ನಿಗದಿ, ನಿರ್ಧಾರವಾಗಲ್ಲ. ಸಾರಿಗೆ ಇಲಾಖೆಗೆ ವರಮಾನ ಕಡಿಮೆ ಬರುತ್ತಿರುವ ಸಮಯದಲ್ಲಿ ಮುಷ್ಕರ ಮಾಡುವದು ನಷ್ಟದಲ್ಲಿರುವ ಸಾರಿಗೆ ಕಾರ್ಪೋರೇಶನ್ ಗಳನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದಂತೆಯೇ ಸರಿ. ಜನರಿಗೆ ಒಂದೆರಡು ದಿನ ತೊಂದರೆ ಆದರೆ ಸಾರಿಗೆ ನೌಕರರಿಗೆ ಡಿಸೆಂಬರ್ ಸಂಬಳಕ್ಕೆ ತೊಂದರೆ, ದೀಪಾವಳಿಯಂತೆ ಹೊಸ ವರುಷಕ್ಕೆ ತೊಳಲಾಟ ಗೋಳಾಟ ತಪ್ಪಿದ್ದಲ್ಲ.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ