ಬೆಂಗಳೂರು,ಡಿ.10- ರಾಜ್ಯದಲ್ಲಿ ಬೀದಿ ದೀಪಗಳು ಹಗಲಿನ ವೇಳೆಯೂ ಉರಿಯುತ್ತಿರುತ್ತವೆ. ವಿಧಾನಸೌಧ, ವಿಕಾಸಸೌಧದ ಕಚೇರಿಗಳಲ್ಲಿ ವಿದ್ಯುತ್ ಉರಿಯುತ್ತಲೇ ಇರುತ್ತದೆ. ಇಂತಹ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಎಂದು ಜೆಡಿಎಸ್‍ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮನವಿ ಮಾಡಿದರು.
ವಿಧಾನ ಪರಿಷತ್‍ನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಿಮ್ಮ ಪಾಡಿಗೆ ನೀವು 105 ಮಂದಿ ಇಟ್ಟುಕೊಂಡು ಪ್ರತಿಪಕ್ಷದಲ್ಲಿ ಕುಳಿತಿದ್ದರೆ ಸಾಕಿತ್ತು. ಸರ್ಕಾರ ಮಾಡುವ ಉಸಾಬರಿ ಯಾಕೆ ಬೇಕಿತ್ತು. ಸರ್ಕಾರ ರಚನೆ ಮಾಡಿದ ಮೇಲೆ ಜಾತಿಗೊಂದು ನಿಗಮ ಮಾಡಿದ್ದು ಯಾಕೆ, ನಿಗಮ ಮಂಡಳಿಗಳ ನೇಮಕಾತಿ ಯಾಕೆ ಬೇಕಿತ್ತು. ರಾಜ್ಯದಲ್ಲಿ ಆರ್ಥಿಕ ದುಸ್ಥಿತಿ ಇರುವಾಗ ಇದ್ದೇಲ್ಲಾ ಬೇಕಿತ್ತಾ ಎಂದು ಪ್ರಶ್ನಿಸಿದರು.
Laxmi News 24×7