Breaking News

ವಿಧಾನಸಭೆಯಲ್ಲಿ ಕರ್ನಾಟಕ ಸ್ಟಾಂಪ್ ವಿಧೇಯಕ ಮಂಡನೆ

Spread the love

ಬೆಂಗಳೂರು,ಡಿ.8- ರಾಜ್ಯ ಸರ್ಕಾರವು ಕರ್ನಾಟಕ ಕೈಗಾರಿಕಾ ನೀತಿ 2020-25ರಲ್ಲಿ ಪ್ರಸ್ತಾಪಿಸಿರುವ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದ ಕರ್ನಾಟಕ ಸ್ಟಾಂಪ್(2ನೇ ತಿದ್ದುಪಡಿ) ವಿಧೇಯಕ 2020ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಶಾಸನ ರಚನಾ ಕಲಾಪದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಮಂಡಿಸಿದರು.

2020-21ರ ಆಯವ್ಯಯ ಗಾತ್ರದಲ್ಲಿ ಪ್ರಸ್ತಾಪಿಸಿರುವ 35ಲಕ್ಷ ರು.ವರೆಗಿನ ಫ್ಲಾಟ್ ಅಥವಾ ಅಪಾರ್ಟ್‍ಮೆಂಟ್‍ನ ಮೊದಲ ಮಾರಾಟಕ್ಕೆ ಸ್ಟಾಂಪ್ ತೆರಿಗೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ವಿದೇಯಕ ಹೊಂದಿದೆ.

ಈ ಉದ್ದೇಶ ಸ್ಥಾಪಿಸಲು ಈಗಲೂ ಆಧ್ಯಾದೇಶವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಕರ್ನಾಟಕ ಸ್ಟಾಂಪ್ ಅನಿಯಮ 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವುದನ್ನು ವಿದೇಯಕದಲ್ಲಿ ಪ್ರಸ್ತಾಪಿಸಲಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ