Breaking News
Home / Uncategorized / ಫೋನ್ ಕಾಲ್, ಮೂರುಸಾವಿರಕ್ಕೆ ಕೇಸ್ ಖಲಾಸ್.!? ಪೊಲೀಸ್ ಇಲ‍ಾಖೆಯ ಕೆಲ ಭ್ರಷ್ಠ ಅಧಿಕಾರಿಗಳಿಂದಲೇ ತನಗೆ ಅನ್ಯಾಯವಾಗಿದೆ.

ಫೋನ್ ಕಾಲ್, ಮೂರುಸಾವಿರಕ್ಕೆ ಕೇಸ್ ಖಲಾಸ್.!? ಪೊಲೀಸ್ ಇಲ‍ಾಖೆಯ ಕೆಲ ಭ್ರಷ್ಠ ಅಧಿಕಾರಿಗಳಿಂದಲೇ ತನಗೆ ಅನ್ಯಾಯವಾಗಿದೆ.

Spread the love

ಕೂಡ್ಲಿಗಿ :ಆರೋಪಿಯಿಂದಲೇ ಗಂಭೀರ ಆರೊಪನೂತನ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಎಂ.ಬಿ ಅಯ್ಯನಹಳ್ಳಿಯ,ಅಕ್ರಮ ಮಧ್ಯ ಪ್ರಖರಣ ಆರೋಪಿಯೋರ್ವನು, ಪೊಲೀಸ್ ಇಲ‍ಾಖೆಯ ಕೆಲ ಭ್ರಷ್ಠ ಅಧಿಕಾರಿಗಳಿಂದಲೇ ತನಗೆ ಅನ್ಯಾಯವಾಗಿದೆ. ಅವರ ದ್ವಿಮುಖ ನೀತಿಯಿಂದಾಗಿ ಅನ್ಯಾಯವಾಗಿದೆ ಹಾಗೂ ತಾರತಮ್ಯವಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದು,ತಮ್ಮ ಗ್ರಾಮಸ್ಥರೊಡಗೂಡಿ ಈ ಕುರಿತು ಹೇಳಿಕೆ ನೀಡಿದ್ದಾನೆ.ಸದರಿ ಪ್ರಕರಣದಲ್ಲಿ ತನ್ನೊಟ್ಟಿಗೆ ಬಂಧಿಸಿದ್ದ ಮೂವರು ಆರೋಪಿಗಳನ್ನುಆರೋಪದಿಂದ ಕೈಬಿಡಲಾಗಿದೆ,ಠಾಣೆಯಲ್ಲಿರುವ ಕೆಲ ಭ್ರಷ್ಠರೇ ಅವರನ್ನು ಕೇಸ್ ನಿಂದ ಖುಲಾಸೆಯಾಗಿಸಿದ್ದಾರೆ, ಆರೋಪಿಗಳನ್ನು ಹಣ ಹಾಗೂ ಪ್ರಭಾವಿಗಳ ಪೋನ್ ಕಾಲ್ ಗೆ ಬಿಡಲಾಗಿದೆ ಎಂದು ಪ್ರಕರಣದ ಆರೋಪಿ ಗಂಭೀರವಾಗಿ ಆರೋಪಿಸಿದ್ದಾನೆ.ಈ ಕುರಿತು ಆರೋಪಿಯು ತನ್ನೂರಿನ ಕೆಲ ಗ್ರಾಮಸ್ಥರ ಸಮಕ್ಷಮದಲ್ಲಿ ಹೇಳಿಕೆ ನೀಡಿದ್ದಾನೆ.ಗ್ರಾಮದಲ್ಲಿ ತನ್ನ ಮನೆಯಲ್ಲಿ ಚಿಕ್ಕದಾಗಿ ಅಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದ್ದ ಸಂದರ್ಭದಲ್ಲಿ,ಹೊಸಹಳ್ಳಿ ಪೊಲೀಸರು ತನ್ನನ್ನು ಬಂದಿಸಿದ್ದಾರೆ.ಈ ಸಂದರ್ಭದಲ್ಲಿಯೇ ತಮ್ಮೂರಿನ ಇನ್ನೂ ಇತರೆ ಮೂವರು ಆರೋಪಿಗಳನ್ನು, ಅಕ್ರಮ ಮಧ್ಯಮಾರಾಟದ ಆರೋಪದಡಿ ಅಗತ್ಯ ಅಕ್ರಮ ಮಧ್ಯ ಸಮೇತ ಬಂಧಿಸಿದ್ದರು.

ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಠಾಣೆಗೆ ತಮ್ಮ ಜೀಪಿನಲ್ಲಿ ಮಾಲು ಸಮೇತ ಕರೆದೊಯ್ಯದಿದ್ದಾರೆ.ಆದರೆ ಮೂವರ ವಿರುದ್ಧ ಪ್ರಕರಣದ ದಾಖಲಿಸದೇ,ಕೆಲ ತಾಸುಗಳಲ್ಲಿ ಮೂವರನ್ನು ಹಾಗೇ ಬಿಟ್ಟಿದ್ದಾರೆ. ಪೊಲೀಸರು ಪ್ರಭಾವಿಗಳ ಪೋನ್ ಕರೆ ಒತ್ತಡಕ್ಕೆ ಮಣಿದು,ಪೊಲೀಸರು ಆರೋಪಿಗಳಿಂದ ತಲಾ ಮೂರು ಸಾವಿರ ರೂ ಲಂಚ ಪಡೆದು ಅವರನ್ನು ಹಾಗೇ ಬಿಡಲಾಗಿದೆ ಎಂದು. ಪ್ರಕರಣದ ಆರೋಪಿ ಪೊಲೀಸರ ದ್ವಿಮುಖ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ,ಇದನ್ನು ಪ್ರಕರಣದ ಆರೋಪಿಗಳು ತನ್ನೆದುರೇ ಹೇಳಿಕೊಂಡಿದ್ದಾರೆ,ಗ್ರಾಮದ ತುಂಬೆಲ್ಲಾ ಪೊಲೀಸರ ಭ್ರಷ್ಠಚಾರದ ವಾಸ್ಥವ ಸತ್ಯ ಜಗ್ಗಾಜಾಹೀರಾಗಿದೆ. ಸತ್ಯವನ್ನು ಮೂವರು ಅರೋಪಿಗಳೇ ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ,ಇದು ಗ್ರಾಮದ ಬಹುತೇಕ ಮೊಬೈಲ್ ಗಳಲ್ಲಿ ರೆಕಾರ್ಡ್ ಆಗಿದ್ದು ಹರಿದಾಡುತ್ತಿದೆ.

ಕಾರಣ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾದಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತವಾಗಿ ತನಿಖೆಯಾಗಬೇಕು,ಪ್ರಾಮಾಣಿಕವಾಗಿ ಪರಿಶೀಲಿಸಿ ತಪ್ಪಿತಸ್ಥ ಉಳಿದ ಆರೋಪಿಗಳ ವಿರುದ್ಧ ಅಗತ್ಯ ಶಿಸ್ಥು ಕ್ರಮ ಜರುಗಿಸಬೇಕೆಂದು.ತಾರತಮ್ಯ ಅವಮ‍ಾನಕ್ಕೆ ತೆರೆ ಎಳೆಯಬೇಕಾಗಿದೆ ತಪ್ಪಿತಸ್ಥ ಮೂವರು ಆರೋಪಿತರ ವಿರುದ್ಧ,ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಆರೋಪಿ ಈ ಮೂಲಕ ಕೋರಿದ್ದಾನೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428


Spread the love

About Laxminews 24x7

Check Also

ಲೈಂಗಿಕ ಹಗರಣ ಪ್ರಕರಣ: ಪ್ರಜ್ವಲ್ ರೇವಣ್ಣ ದೇಶ ತೊರೆಯಲು ಬಿಜೆಪಿ ಸಹಾಯ ಮಾಡಿದೆ; ಪ್ರಿಯಾಂಕ್ ಖರ್ಗೆ

Spread the loveಬೆಂಗಳೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ದೇಶ ತೊರೆದಿದ್ದಾರೆ ಎಂಬ ವರದಿಗಳ ನಡುವೆ, ಸಚಿವ ಪ್ರಿಯಾಂಕ್ ಖರ್ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ