ಬೆಂಗಳೂರು : ಬಿಜೆಪಿಯಲ್ಲಿ ಮೂಲ, ವಲಸಿಗ ಬಿಜೆಪಿಗರು ಎಂಬುದು ಇಲ್ಲ. ನಾವೆಲ್ಲರೂ ಒಂದೇ ಯಾಗಿದ್ದೇವೆ. ಬಿಜೆಪಿ ಸೇರಿದ 17 ಶಾಸಕರೂ ಸಚಿವರಾಗಲು ಅರ್ಹರು. ಸಿಎಂ ಹಾಗೂ ಬಿಜೆಪಿ ವರಿಷ್ಠರ ಜೊತೆಗೆ ಚರ್ಚಿಸಿ ಸಚಿವ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬೆಂಗಳೂರಿನ ಆನೇಕಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಲ್ಲ, ಪುನರ್ ರಚನೆಯಾಗಲಿದೆ ಎಂಬ ಸುಳಿವು ನೀಡಿದರು. ರಾಜ್ಯದಲ್ಲಿ ಮೂಲ ಬಿಜೆಪಿಗರು, ವಲಸಿಗ ಬಿಜೆಪಿಗರು ಅನ್ನೋ ಪ್ರಶ್ನೆಯೇ ಇಲ್ಲ. ನಾಯಕತ್ವ ಬದಲಾವಣೆಯಂತೂ ಇಲ್ಲವೇ ಇಲ್ಲ ಎಂದರು.
Laxmi News 24×7