Breaking News

ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ 62 ವರ್ಷದ ವೃದ್ಧ

Spread the love

ಬೆಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ 62 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ನವೆಂಬರ್ 24ರಂದು ಬೆಂಗಳೂರಿನ ದೇವನಹಳ್ಳಿ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿ ತನ್ನ ಮಗಳ ಮನೆಯಲ್ಲಿ ಬಾಲಕಿಯ ಮೇಲೆ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ವೆಂಕಟರಮಣಪ್ಪ ಎಂದು ಗುರುತಿಸಲಾಗಿದೆ. ದೇವಾಲಯವೊಂದರ ಅರ್ಚಕನಾಗಿರುವ ಈತ ದೇವನಹಳ್ಳಿಯ ಚೌಡೇಶ್ವರಿ ದೇವಸ್ಥಾನದ ಪಕ್ಕ ಗಂಡನ ಜೊತೆ ವಾಸವಾಗಿರುವ ತನ್ನ ಮಗಳ ಮನೆಗೆ ತೆರಳಿದ್ದನು.

ಮಗಳ ಪತಿಯೂ ಚೌಡೇಶ್ವರಿ ದೇಗುಲದ ಅರ್ಚಕನಾಗಿದ್ದಾನೆ. ಹೀಗಾಗಿ ಎಂದಿನಿಂತೆ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಹೋಗಿದ್ದನು. ನವೆಂಬರ್ 24ರಂದು ಸಂಜೆ 4.30ರ ಸುಮಾರಿಗೆ ವೆಂಕಟರಮಣಪ್ಪ ಮಗಳ ಮನೆಯ ಹೊರಗಡೆ ಬಾಲಕಿಯೊಬ್ಬಳು ಆಟವಾಡುತ್ತಿದ್ದುದನ್ನು ನೋಡಿದ್ದಾನೆ. ವರದಿಗಳ ಪ್ರಕಾರ, ಬಾಲಕಿಯ ಕುಟುಂಬವು ಹತ್ತಿರದಲ್ಲಿಯೇ ವಾಸವಾಗಿದೆ. ಆಕೆಯ ತಂದೆ ಅಂಗಡಿಯೊಂದನ್ನು ನಡೆಸುತ್ತಿದ್ದು, ಈ ಮೂಲಕ ಕುಟುಂಬದ ಬಂಡಿ ಸಾಗುತ್ತಿತ್ತು ಎಂದು ಪೊಲೀಸ್ ಉಪ ಆಯುಕ್ತ ಸಿ.ಕೆ ಬಾಬಾ ತಿಳಿಸಿದ್ದಾರೆ.

ಬಾಲಕಿ ಆಟವಾಡುತ್ತಿದ್ದುದನ್ನು ಕಂಡ ವೆಂಕಟರಮಣಪ್ಪ, ತಿಂಡಿಯ ಆಸೆ ತೋರಿಸಿ ಮನೆಗೆ ಕರೆದಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇತ್ತ ಆಟವಾಡಲು ಹೋದ ಬಾಲಕಿ ಬಹಳ ಹೊತ್ತಾದರೂ ಮನೆಗೆ ವಾಪಸ್ಸಾಗದಿದ್ದರಿಂದ ಆತಂಕಗೊಂಡು ಆಕೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ದೇವಸ್ಥಾನದ ಹೊರಗಡೆ ಹೂವು ಮಾರುತ್ತಿದ್ದ ಮಹಿಳೆ, ಬಾಲಕಿ ಅರ್ಚಕರ ಮನೆಗೆ ಹೋಗುತ್ತಿರುವುದನ್ನು ಕಂಡಿದ್ದಾಗಿ ಮಾಹಿತಿ ನೀಡಿದ್ದಾರೆ. ಕೂಡಲೇ ಕುಟುಂಬ ಅರ್ಚಕನ ಮನೆಗೆ ತೆರಳಿದೆ. ಈ ವೇಳೆ ಬಾಲಕಿ ಅಳುತ್ತಾ ಮನೆಯಿಂದ ಹೊರಗಡೆ ಬಂದಿದ್ದಾಳೆ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ