Breaking News

‘ಕೇಬಲ್ ಟಿ.ವಿ. ಜಾಲ ನಿಯಂತ್ರಣ ಕಾಯ್ದೆ ಅಡಿ ನೀವು ತೆಗೆದುಕೊಂಡಿರುವ ಕ್ರಮಗಳು ಯಾವುವು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

Spread the love

ನವದೆಹಲಿ: ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ‘ಕೇಬಲ್ ಟಿ.ವಿ. ಜಾಲ ನಿಯಂತ್ರಣ ಕಾಯ್ದೆ ಅಡಿ ನೀವು ತೆಗೆದುಕೊಂಡಿರುವ ಕ್ರಮಗಳು ಯಾವುವು ಎಂದು ಈ ಹಿಂದೆ ಪ್ರಶ್ನಿಸಿದ್ದೆವು. ನಾವು ಕೇಳಿದ್ದ ಯಾವ ಪ್ರಶ್ನೆಗೂ ನಿಮ್ಮ ಪ್ರಮಾಣಪತ್ರದಲ್ಲಿ ಉತ್ತರ ಇಲ್ಲ’ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ. ದೂರುಗಳು ಬಂದಿದ್ದರೆ, ಅವುಗಳನ್ನು ಬಗೆಹರಿಸಲು ಈವರೆಗೆ ಏಕೆ ವ್ಯವಸ್ಥೆ ರೂಪಿಸಿಲ್ಲ ಯಾವುದೇ ವ್ಯವಸ್ಥೆ ಇಲ್ಲದೇ ಇದ್ದರೆ, ಒಂದು ವ್ಯವಸ್ಥೆಯನ್ನು ರೂಪಿಸಿ. ಸುಳ್ಳು ಸುದ್ದಿಗೆ ತಡೆ ಒಡ್ಡುವ ಅಧಿಕಾರ ಸರ್ಕಾರಕ್ಕೆ ಇರುವಾಗ, ಎನ್‍ಬಿಎಸ್‍ಎಯಂತಹ ಹೊರಗಿನ ಸಂಸ್ಥೆಗೆ ಏಕೆ ನಿಯಂತ್ರಣದ ಜವಾಬ್ದಾರಿ ವಹಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಪೀಠವು ಪ್ರಶ್ನಿಸಿತು. ಈ ಕಾಯ್ದೆ ಅಡಿ ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಮೆಹ್ತಾ ಉತ್ತರಿಸಿದರು.

ತಬ್ಲೀಗ್ ಜಮಾತ್‍ನಿಂದ ಕೋವಿಡ್ ಹರಡಿತು ಎಂದು ಕೆಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದ ವರದಿಗಳ ವಿರುದ್ಧ ಜಮಾತ್ ಉಲೇಮಾ ಎ ಹಿಂದ್ ಸಂಘಟನೆಯು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾಧ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ ಈ ಸೂಚನೆ ನೀಡಿತು.

‘ಸುದ್ದಿವಾಹಿನಿಗಳ ಮೇಲೆ ಸಾರಾಸಗಟಾಗಿ ನಿμÉೀಧ ಹೇರುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಸುದ್ದಿವಾಹಿನಿಗಳ ಸ್ವಯಂ ನಿಯಂತ್ರಣಕ್ಕೆ ನ್ಯೂಸ್ ಬ್ರಾಡ್‍ಕಾಸ್ಟರ್ಸ್ ಸ್ಟಾಂಡರ್ಡ್ ಅಥಾರಿಟಿ (ಎನ್‍ಬಿಸಿಎ) ಇದೆ’ ಎಂದು ಸರ್ಕಾರವು ತನ್ನ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿತ್ತು. ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷರ್ ಮೆಹ್ತಾ ಈ ಮಾಹಿತಿಯನ್ನು ಪೀಠಕ್ಕೆ ನೀಡಿದರು.

ಸರ್ಕಾರದ ಈ ಉತ್ತರಕ್ಕೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ಕೇಬಲ್ ಟಿ.ವಿ. ಜಾಲ ನಿಯಂತ್ರಣ ಕಾಯ್ದೆ ಅಡಿ ನೀವು ತೆಗೆದುಕೊಂಡಿರುವ ಕ್ರಮಗಳು ಯಾವುವು ಎಂದು ಪ್ರಶ್ನಿಸಿದ್ದೆವು. ನಾವು ಕೇಳಿದ್ದ ಯಾವ ಪ್ರಶ್ನೆಗೂ ನಿಮ್ಮ ಪ್ರಮಾಣಪತ್ರದಲ್ಲಿ ಉತ್ತರ ಇಲ್ಲ’ ಎಂದು ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.


Spread the love

About Laxminews 24x7

Check Also

ನಾನು ಹುಟ್ಟು ಕಾಂಗ್ರೆಸಿಗ, ಬಿಜೆಪಿ – ಆರ್​​ಎಸ್​​ಎಸ್ ಜೊತೆ ಕೈ ಜೋಡಿಸುವ ಪ್ರಮೇಯವೇ ಇಲ್ಲ: ಡಿಸಿಎಂ

Spread the loveಬೆಂಗಳೂರು : ನಾನು ಅಪ್ಪಟ ಕಾಂಗ್ರೆಸಿಗ. ಹುಟ್ಟಿನಿಂದ ಕಾಂಗ್ರೆಸ್​ ಪಕ್ಷದಲ್ಲಿದ್ದೇನೆ. ಜೀವ ಇರುವ ತನಕವೂ ಕಾಂಗ್ರೆಸಿಗನಾಗಿಯೇ ಇರುತ್ತೇನೆ. ನನ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ