ರಾಯಚೂರು: ಬೈಕಿನಲ್ಲಿ ಬಂದ ಖದೀಮರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬಳಿಯಿದ್ದ ಹಣ ಎಗರಿಸಿ ಪರಾರಿಯಾಗಿರುವ ಘಟನೆ ರಾಯಚೂರಿನ ಗಂಜ್ ರಸ್ತೆಯ ರಿಲಾಯನ್ಸ್ ಮಾರ್ಟ್ ಮುಂಭಾಗದಲ್ಲಿ ನಡೆದಿದೆ.

ಸಂಗಾ ನಾಯಕ ಬಡಾವಣೆಯ ಹೇಮಾವತಿ ಎಂಬುವವರಿಗೆ ಸೇರಿದ ಹಣವಾಗಿದೆ. ಖದೀಮರು ಹೇಮಾವತಿ ಕೈಯಲ್ಲಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗುತ್ತಿರುವ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾಗ್ ನಲ್ಲಿ ಒಂದೂವರೆ ಲಕ್ಷ ಹಣವಿತ್ತು. ಈ ಘಟನೆ ನಿನ್ನೆ ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ಲಾಟ್ ಖರೀದಿಸಲು ಯೂನಿಯನ್ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಬರುವಾಗ ಆರೋಪಿಗಳು ಕಳವು ಮಾಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಸದರ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Laxmi News 24×7