Breaking News

ಜೂನಿಯರ್ ಚಿರು ಆಗಮನದಿಂದಾಗಿ ಚಿರಂಜೀವಿ ಸರ್ಜಾ ಕುಟುಂಬಸ್ಥರಲ್ಲಿ ಸಂಭ್ರಮ

Spread the love

ಬೆಂಗಳೂರು: ಜೂನಿಯರ್ ಚಿರು ಆಗಮನದಿಂದಾಗಿ ಚಿರಂಜೀವಿ ಸರ್ಜಾ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದ್ದು, ಇನ್ನೂ ವಿಶೇಷವೆಂದರೆ ಮೇಘನಾ ರಾಜ್ ಸರ್ಜಾ ಅವರ ಸೀಮಂತ ಕಾರ್ಯದಿಂದ ಹಿಡಿದು, ಮಗುವನ್ನು ಸ್ನಾನ ಮಾಡಿಸುವುದು, ನಾಮಕರಣ ಮಾಡುವ ಶಾಸ್ತ್ರದ ವರೆಗೆ ಉತ್ತರ ಕರ್ನಾಟಕದ ಶೈಲಿಯನ್ನು ಅನುಸರಿಸಿರುವುದು ವಿಶೇಷವಾಗಿದೆ. ಈ ಬಗ್ಗೆ ಎಲ್ಲ ಶಾಸ್ತ್ರಗಳ ನೇತೃತ್ವ ವಹಿಸಿದ್ದ ವನಿತಾ ಗುತ್ತಲ್ ಅವರು ಹೇಗೆಲ್ಲ ಶಾಸ್ತ್ರ ನೆರವೇರಿಸಿದರು. ಯಾವ ರೀತಿ ಆರೈಕೆ ಮಾಡಲಾಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

ವನಿತಾ ಅವರಿಗೆ ಹೊಳೆದದ್ದು ಹೇಗೆ?
ನಮ್ಮ ಪತಿ ಒಂದು ದಿನ ತಡವಾಗಿ ಬಂದರು, ಯಾಕೋ ಬರುವುದು ತಡವಾಯಿತು ಎಂದು ಕರೆ ಮಾಡಿದೆ. ಆಗ ನನ್ನ ಮಕ್ಕಳು ಅಪ್ಪ ಒಂದು ದಿನ ತಡವಾಗಿ ಬಂದಿದ್ದಕ್ಕೆ ನೀನಗೆ ತಡೆಯಲು ಆಗುತ್ತಿಲ್ಲ. ಚಿರು ಅವರು ತೀರಿದ್ದಾರೆ, ಮೇಘನಾ ಅವರ ಹೊಟ್ಟೆಯಲ್ಲಿ ಪಾಪು ಇದೆ ಅವರು ಹೇಗೆ ಇರಬೇಡ ಎಂದು ಪ್ರಶ್ನಿಸಿದರು. ಆಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ತಕ್ಷಣವೇ ನಮಗೆ ಪರಿಚಯವಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಸಂಪರ್ಕಿಸಿ, ಮೇಘನಾ ಅವರ ಸೀಮಂತ ಶಾಸ್ತ್ರ ಮಾಡುವ ಬಗ್ಗೆ ಚರ್ಚಿಸಿದೆವು. ಅಲ್ಲದೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಾರುತಿ ಬಡಿಗೇರ್ ಅವರ ಬಳಿ ನೈಸರ್ಗಿಕ ಬಣ್ಣದಿಂದ ಕೈಯಿಂದ ಮಾಡಿದ ದೇಶದ ಸಂಸ್ಕೃತಿ, ಮಹಾಭಾರತ ಹಾಗೂ ರಾಮಾಯಣ ಸನ್ನಿವೇಶಗಳ ಚಿತ್ರಗಳನ್ನು ಒಳಗೊಂಡ ತೊಟ್ಟಿಲನ್ನು ತಯಾರಿಸಲು ಕೇಳಿಕೊಂಡೆವು.

ತೊಟ್ಟಿಲಿನ ಬೆಲೆ ಎಷ್ಟು?
ಕಲಘಟಗಿಯ ಕರಕುಶಲಕರ್ಮಿ ಮಾರುತಿ ಬಡಿಗೇರ್ ತೊಟ್ಟಿಲು ತಯಾರಿಸಿ ಕೊಟ್ಟರು. ಆರಂಭದಲ್ಲಿ ಒಂದು ತೊಟ್ಟಿಲಿಗೆ 1.10 ಲಕ್ಷ ರೂ. ಹೇಳಿದ್ದರು. ನಾನು ಮೇಘನಾ ಕುಟುಂಬಕ್ಕೆ ತೊಟ್ಟಿಲು ಕೊಡುತ್ತಿರುವುದು ತಿಳಿದು 15 ಸಾವಿರ ರೂ. ಕಡಿಮೆ ಮಾಡಿದರು. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ಸಹಾಯ ಮಾಡುತ್ತೇವೆ. ಆದರೆ ಮೇಘನಾ ಅವರು ಇಷ್ಟು ಬೇಸರಗೊಂಡಿದ್ದಾರೆ. ಹೀಗಾಗಿ ಸಹಾಯ ಮಾಡಬೇಕು ಎಂದು ಈ ಕೆಲಸ ಮಾಡಲು ನಿರ್ಧರಿಸಿದೆವು ಎಂದು ವನಿತಾ ತಿಳಿಸಿದರು.


Spread the love

About Laxminews 24x7

Check Also

ಕರಾವಳಿಯಲ್ಲಿ ಜನಪದ ದೀಪಾವಳಿ: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ ಆಚರಣೆ

Spread the loveಕಾಪು: ತುಳುನಾಡು ಹಲವಾರು ಆಚರಣೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ತವರೂರು. ಇಲ್ಲಿ ನಡೆಯುವ ಪ್ರತಿಯೊಂದು ಹಬ್ಬ, ಆಚರಣೆಗಳಿಗೂ ಅದರದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ